ಈ ರಾಶಿಯವರಿಂದು ಆರೋಗ್ಯದ ಬಗ್ಗೆ ಕಾಳಜಿವಹಿಸಿ: ದಿನ ಭವಿಷ್ಯ
ಈ ರಾಶಿಯವರಿಂದು ಆರೋಗ್ಯದ ಬಗ್ಗೆ ಕಾಳಜಿವಹಿಸಿ: ದಿನ ಭವಿಷ್ಯ

ಶುಕ್ರವಾರ, ಜೂನ್ 14, 2024, ದೈನಂದಿನ ರಾಶಿ ಭವಿಷ್ಯ 

ಮೇಷ ರಾಶಿ: ಮನೆ ದೇವರ ದರ್ಶನ ಪಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಹಣಕಾಸಿನ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತಿದ್ದೀರಿ, ಆದರೆ ಆಸ್ತಿಯೇ ಎಲ್ಲವೂ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ. ಹಣಕಾಸು ವ್ಯವಹಾರ, ಯೋಜನೆಗಳ ರೂಪಿಸಲು ಸಾಕಷ್ಟು ಸಮಯವಿರುತ್ತದೆ.ಆದರೆ, ವೈಯಕ್ತಿಕ ಜೀವನಕ್ಕೂ ಕೊಂಚ ಸಮಯ ನೀಡಿ. (ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ: ಕನಸು ಈಡೇರಿಕೆಯ ಸಮಯವಿದು. ಆದರೆ, ಇದಕ್ಕೆ ನಿಮ್ಮ ಪರಿಶ್ರಮದ ಅಗತ್ಯವಿದೆ. ವಾಹನ ಚಾಲನೆ ವೇಳೆ ಎಚ್ಚರವಿರಲಿ. ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳ ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ. (ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ತಪ್ಪು ಮಾಡುತ್ತಿರುವ ಮನೋಭಾವ ನಿಮ್ಮಲ್ಲಿದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಶಕ್ತಿ ಹೆಚ್ಚಿಸಿಕೊಂಡು ನಿಮ್ಮ ಮೇಲೆ ನಿಯಂತ್ರಣ ಹೊಂದಿ. ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ. (ಭಕ್ತಿಯಿಂದ ಸಾಲಿಗ್ರಾಮ ಸ್ವರೂಪ ಶ್ರೀ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಉತ್ತಮ ದಿನ. ಉತ್ತಮ ಸಾಮಾಜಿಕ ಸಂಪರ್ಕ ಬೆಳೆಸಿಕೊಳ್ಳಿ. ಉದ್ವೇಗಕ್ಕೊಳಗಾಗದಿರಿ. ಅತಿಯಾದ ನಿರೀಕ್ಷೆಗಳು ಬೇಡ. ಇದು ನಿಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಇಲ್ಲಿಯವರೆಗೆ ಅನವಶ್ಯಕವಾಗಿ ಹಣ ವ್ಯಯಿಸುತ್ತಿದ್ದವರಿಗೆ ಹಣಕಾಸಿನ ಕೊರತೆಯ ನಡುವೆ ದಿಢೀರ್ ಅವಶ್ಯಕತೆ ಉಂಟಾಗುವುದರಿಂದ ಹಣ ಸಂಪಾದಿಸುವುದು ಮತ್ತು ಉಳಿಸುವುದು ಎಷ್ಟು ಕಷ್ಟಎಂಬುದು ಅರ್ಥವಾಗುತ್ತದೆ. (ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಮಹಾಗಣಪತಿ ಪ್ರಾರ್ಥನೆ ಮಾಡಿ ಶುಭವಾಗುವುದು)

ಸಿಂಹ ರಾಶಿ: ರಾಜಿ ವಿಚಾರದಲ್ಲಿ ಕಷ್ಟಗಳನ್ನು ಎದುರಿಸಲಿದ್ದೀರಿ. ಸಂವೇದನಾಶೀಲ ಸಂಗತಿಯಾಗಿರುವ ಸಂದರ್ಭಗಳು ಎದುರಾಗಬಹುದು. ಬದಲಾವಣೆಗಳಿಗಿದು ಸಕಾಲವಲ್ಲ. ಎಚ್ಚರಿಕೆವಹಿಸಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)

ಕನ್ಯಾ ರಾಶಿ: ಶುಕ್ರನ ಪ್ರಭಾವ ನಿಮ್ಮ ರಾಶಿ ಮೇಲಿದೆ. ಇತರರ ಅಗತ್ಯಗಳನ್ನು ಪೂರೈಸಲಿದ್ದೀರಿ. ಎಲ್ಲರನ್ನೂ ಎಲ್ಲಾ ವಿಚಾರದಲ್ಲಿ ತೃಪ್ತಿಪಡಿಸುವುದು ಅಸಾಧ್ಯ. ಬೇಸರ ಬೇಡ. ಮುನ್ನಡೆಯಿರಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ಮನೆಯಲ್ಲಿ ಪ್ರೀತಿ ಮತ್ತು ತಿಳುವಳಿಕೆಯನ್ನು ಕಾಣುವಿರಿ. ನೀವು ಯೋಜನೆಯ ಸಂಶೋಧನೆಯಲ್ಲಿ ಕೆಲಸ ಮಾಡಬಹುದು. ಇದಲ್ಲದೇ ವ್ಯಾಪಾರಕ್ಕೆ ಸಂಬಂಧಿಸಿದವರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮಾತುಗಳನ್ನು ವಿವರಿಸಲು ನಿಮಗೆ ಸ್ವಲ್ಪ ಕಷ್ಟ ವಾಗಬಹುದು. (ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಗಣಪತಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಕುಟುಂಬದ ಸದಸ್ಯರ ಉತ್ತಮ ಸಲಹೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಸಾಮರ್ಥ್ಯವು ಗಮನಾರ್ಹವಾಗಿರುತ್ತದೆ. ಹೊಸ ಆಲೋಚನೆಗಳನ್ನು ಪರೀಕ್ಷೆಗೆ ಒಳಪಡಿಸಲು ಸೂಕ್ತ ಸಮಯ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ: ನಿಮ್ಮ ಭಾವನಾತ್ಮಕ ಮಹತ್ವಾಕಾಂಕ್ಷೆಗಳನ್ನು ಈಡೇರುವ ಸಮಯವಿದು. ಆದರೆ, ನಿಮ್ಮ ನೈಜ ಸನ್ನಿವೇಶಗಳು ನಿಮ್ಮ ಭರವಸೆಯನ್ನು ತೃಪ್ತಿಪಡಿಸಲು ಅನುಮತಿಸುತ್ತದೆಯೇ ಎಂಬುದನ್ನು ಗಮನಿಸ ಬೇಕಾಗುತ್ತದೆ. (ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ಕುಟುಂಬದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನೀವು ಏನನ್ನಾದರೂ ಮಾಡಬೇಕು.ಇಂದು ಹಿಂದಿನ ಮೊತ್ತವನ್ನು ಇನ್ನೂ ಹಿಂತಿರುಗಿಸದ ಸಂಬಂಧಿಕರಿಗೆ ನಿಮ್ಮ ಹಣವನ್ನು ಸಾಲ ನೀಡುವುದನ್ನು ತಪ್ಪಿಸಿ. ಪ್ರೀತಿಪಾತ್ರರ ಜೊತೆ ವಾದಗಳನ್ನು ಉಂಟುಮಾಡುವ ವಿವಾದಾತ್ಮಕ ಸಮಸ್ಯೆಗಳನ್ನು ನೀವು ತಪ್ಪಿಸಬೇಕು. ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಮತ್ತು ದುರ್ಬಲವಾಗಿರುತ್ತವೆ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ಮೂಲಭೂತ ಅಂಶಗಳನ್ನು ಉತ್ತಮವಾಗಿ ನಿಭಾಯಿಸಿದರೆ ನಿಮ್ಮ ಯೋಜನೆ ಗಳು ಉತ್ತಮವಾಗಿರುತ್ತವೆ. ಯಾವುದನ್ನೂ ಮತ್ತು ಯಾರನ್ನೂ ಲಘುವಾಗಿ ಪರಿಗಣಿಸಬೇಡಿ, ಕೆಲಸವು ಯೋಗ್ಯವಾಗಿದೆ ಎಂದೆನಿಸಿದರೆ, ಅದನ್ನು ನೀವೇ ಮಾಡುವುದು ಉತ್ತಮವಾಗಿರುತ್ತದೆ. (ಭಕ್ತಿಯಿಂದ ಶ್ರೀ ಬದರೀನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಮತ್ತು ಅನಗತ್ಯ ವಿಶ್ಲೇಷಣೆ ಮತ್ತು ಊಹಾಪೋಹ ಗಳಿಂದ ದೂರವಿರಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಕಡಿಮೆಯಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಪೂರ್ಣ ವಿಶ್ವಾಸದಿಂದ ನಿಮ್ಮ ಕೆಲಸವನ್ನು ಮಾಡಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ಅಷ್ಟಮಿ 

ನಕ್ಷತ್ರ: ಉತ್ತರ ನಕ್ಷತ್ರ.

ರಾಹುಕಾಲ: 10:30AM ರಿಂದ 12:00PM

ಗುಳಿಕಕಾಲ: 07:30AM ರಿಂದ 09:00AM

ಯಮಗಂಡಕಾಲ: 03:00PM ರಿಂದ 04:30PM

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others

HL

others