ದೊಡ್ಡಬಳ್ಳಾಪುರದಲ್ಲಿ ಅಬ್ಬರಿಸಿದ ಮಳೆ.. ತೇರಿನ ಬೀದಿ ರಸ್ತೆ ಜಲಾವೃತ..!, ಸ್ಥಳೀಯರ ಆಕ್ರೋಶದ ವಿಡಿಯೋ ನೋಡಿ
ದೊಡ್ಡಬಳ್ಳಾಪುರದಲ್ಲಿ ಅಬ್ಬರಿಸಿದ ಮಳೆ.. ತೇರಿನ ಬೀದಿ ರಸ್ತೆ ಜಲಾವೃತ..!, ಸ್ಥಳೀಯರ ಆಕ್ರೋಶದ ವಿಡಿಯೋ ನೋಡಿ

ದೊಡ್ಡಬಳ್ಳಾಪುರ, (ಜೂ.13); ತಾಲೂಕಿನ‌ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಇಂದು‌ ಸಂಜೆ ಮಳೆ ಅಬ್ಬರಿಸಿದ್ದು, ಅನೇಕ ಕಡೆ ಅವಾಂತರ ಸೃಷ್ಟಿಯಾಗಿದೆ.

ಗುರುವಾರ ಮಧ್ಯಾಹ್ನ 3 ಗಂಟೆ ವೇಳೆ ಆರಂಭವಾದ ಮಳೆ, ಸುಮಾರು ಮುಕ್ಕಾಲು ಗಂಟೆಗಳ ಕಾಲ ಸುರಿದಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.

ಇನ್ನೂ ನಗರದ ತೇರಿನ ಬೀದಿ ಬಳಿಯ ರಸ್ತೆಯ ಮೇಲೆ ಸುಮಾರು ಒಂದು ಅಡಿಯಷ್ಟು ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇಲ್ಲಿನ ರಾಜಕಾಲುವೆಯಲ್ಲಿ ನೀರು ತುಂಬಿದ್ದು, ಪ್ರಾಣಾಪಾಯದ ಆತಂಕ ಎದುರಾಗಿದೆ.

ಈ ಕುರಿತು ಸ್ಥಳೀಯರಾದ ಚೇತನ್, ಕೇಬಲ್ ರಾಮಚಂದ್ರ ಎನ್ನುವವರು  ವಿಡಿಯೋ ಸೆರೆ ಹಿಡಿದಿದ್ದು, ತಾಲೂಕಿನಲ್ಲಿ ಹೇಳೋರ್ ಕೇರೋರು ಇಲ್ಲವಾಗಿದೆ. ಎಲೆಕ್ಷನ್ ಇದ್ದಾಗ ಅಣ್ಣಾ ಅಪ್ಪಾ ಅನ್ನೋರು ಎಲ್ಲೋಗಿದ್ದಾರೆ ಇವತ್ತು, ಟೂವೀಲ್ಹರ್ ಚಕ್ರ ಮುಳುಗ್ತಾ ಇದೆ. ಇಲ್ ಶಾಲೆ, ಶಾಲೆ ಮಕ್ಕಳು ಹೇಗ್ ಓಡಾಡಬೇಕು..?, ಕೆಲವೇ ನಿಮಿಷಗಳ ಮಳೆಗೆ ಈ ಅವಾಂತರ ಸೃಷ್ಟಿಯಾದರೆ ಮುಂದಿನ ಮೂರು ತಿಂಗಳ ಮಳೆಗೆ ಹೊಣೆಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮಳೆಯ ಮುಂಜಾಗ್ರತೆ ವಹಿಸಿ ಸೂಕ್ತ ರೀತಿಯಲ್ಲಿ ರಾಜ ಕಾಲುವೆ, ಚರಂಡಿ ಸ್ವಚ್ಛಗೊಳಿಸದೆ ಈ ರೀತಿಯ ಸಮಸ್ಯೆ ಎದುರಾಗುತ್ತಿದ್ದು, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others