ತಿರುಮಲ ಹಿಂದೂಗಳಿಗೆ ಸೇರಿದ್ದು..ಇಲ್ಲಿ  ಓಂ ನಮೋ ವೆಂಕಟೇಶಾಯ ಘೋಷಣೆ ಮಾತ್ರ ಕೇಳಿಸಬೇಕು: ಸಿಎಂ ಚಂದ್ರಬಾಬು ನಾಯ್ಡು
ತಿರುಮಲ ಹಿಂದೂಗಳಿಗೆ ಸೇರಿದ್ದು..ಇಲ್ಲಿ ಓಂ ನಮೋ ವೆಂಕಟೇಶಾಯ ಘೋಷಣೆ ಮಾತ್ರ ಕೇಳಿಸಬೇಕು: ಸಿಎಂ ಚಂದ್ರಬಾಬು ನಾಯ್ಡು

ತಿರುಪತಿ, (ಜೂ.13): ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದಾಗಿದ್ದು ಇಲ್ಲಿ ಓಂ ನಮೋ ವೆಂಕಟೇಶಾಯ ಘೋಷಣೆ ಮಾತ್ರ ಕೇಳಿಬರಬೇಕು ಎಂದು ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಇಂದು ತಿರುಪತಿ-ತಿರುಮಲ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ  ಅವರು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.

ದರ್ಶನದ ಬಳಿಕ ದೇಗುಲದ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಶ್ರೀ ವೆಂಕಟೇಶ್ವರಸ್ವಾಮಿಯ ಆಶೀರ್ವಾದದಿಂದ ನಾನು ಮತ್ತೆ ಸಿಎಂ ಆಗಿದ್ದೇನೆ.

ಈ ಹಿಂದಿನ ಸರ್ಕಾರದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅನಾಚಾರಗಳು ನಡೆದಿವೆ. ನಮ್ಮ ಸರ್ಕಾರದ ಶುದ್ಧೀಕರಣ ಕಾರ್ಯ ಇಲ್ಲಿಂದಲೇ ಆರಂಭಿಸುತ್ತೇವೆ. ಇನ್ನು ಮುಂದೆ ನಾಯಕರು ಬಂದಾಗ ನೇತಾಡುವ ಪರದೆಗಳು ಮತ್ತು ಮರಗಳು ಇರುವುದಿಲ್ಲ. ತಿರುಮಲದಲ್ಲಿ ಗಾಂಜಾ, ಮದ್ಯ ಮುಕ್ತವಾಗಿ ಸಿಗುವಂತೆ ಮಾಡಲಾಗಿತ್ತು. ಇವುಗಳೆಲ್ಲವನ್ನೂ ಇದೀಗ ನಾವು ನಿರ್ಮೂಲನೆ ಮಾಡುತ್ತೇವೆ ಎಂದರು.

ಅಂತೆಯೇ ತಿರುಮಲದಿಂದಲೇ ಶುದ್ಧೀಕರಣ ಆರಂಭವಾಗಬೇಕು. ಪ್ರಸಾದ ತಯಾರಿಕೆ ಮತ್ತು ವಿತರಣೆಯಲ್ಲಿನ ದೋಷಗಳು ಮತ್ತು ತಿರುಮಲದ ಶುಚಿತ್ವದ ಬಗ್ಗೆ ವಿಶೇಷ ಗಮನಹರಿಸಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಸಮಸ್ತ ಜನತೆಗೆ ಒಳಿತನ್ನು ಮಾಡುವುದೇ ಗುರಿಯಾಗಿದೆ. ಸರ್ಕಾರದ ಜತೆಗೆ ಜನರು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು.

ತಿರುಮಲ ಪವಿತ್ರ ತಾಣವನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸೋಣ ಎಂದು ಕರೆ ನೀಡಿದ ಚಂದ್ರಬಾಬು ನಾಯ್ಡು, ನಾನು ಬೆಳಗ್ಗೆ ಎದ್ದಾಗ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಒಂದು ನಿಮಿಷ ತುಂಬು ಹೃದಯದಿಂದ ಪ್ರಾರ್ಥಿಸುತ್ತೇನೆ. ಜಗತ್ತಿನಾದ್ಯಂತ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲು ಕ್ರಮಕೈಗೊಳ್ಳುತ್ತೇವೆ.

ಕಳೆದುಹೋದ ಮತ್ತು ತೊಂದರೆಗೊಳಗಾದ ಸಮುದಾಯಗಳನ್ನು ನಾವು ಬೆಂಬಲಿಸಬೇಕು. ರಾಜಧಾನಿ ಅಮರಾವತಿ, ಪೋಲಾವರಂ ಯೋಜನೆ ಕುಸಿದಿದೆ. ಅವುಗಳನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ನಾನು ಕೆಲಸ ಮಾಡುತ್ತೇನೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others

HL

others