ಅತಿ ವಿನಯಂ.. ಧೂರ್ತ ಲಕ್ಷಣಂ ಎಂದು ಟೀಕಿಸಿದ ಪ್ರಕಾಶ್‌ ರಾಜ್‌; ಶೇರ್ ಮಾಡಿರುವ ವಿಡಿಯೋ ನೋಡಿ
ಅತಿ ವಿನಯಂ.. ಧೂರ್ತ ಲಕ್ಷಣಂ ಎಂದು ಟೀಕಿಸಿದ ಪ್ರಕಾಶ್‌ ರಾಜ್‌; ಶೇರ್ ಮಾಡಿರುವ ವಿಡಿಯೋ ನೋಡಿ

ನವದೆಹಲಿ, (ಜೂ.13): ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ನಿತೀಶ್‌ ಕುಮಾರ್‌ ಹಾಗೂ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರ ಪಕ್ಷಗಳ ಮೈತ್ರಿಯಿಂದಾಗಿ ಕೇಂದ್ರರಲ್ಲಿ ಮತ್ತೆ ಸರ್ಕಾರ ರಚಿಸಲು ಸಾಧ್ಯವಾಗಿದೆ. ಈ ಇಬ್ಬರು ಎಲ್ಲಿ ಕೈಕೊಡುತ್ತಾರೋ ಎಂಬ ಆತಂಕ ಇತ್ತಾದರೂ ಯಾವುದೇ ತೊಂದರೆ ಇಲ್ಲದೆ, ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ‌

ಮತ್ತೊಂದೆಡೆ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಅವರು ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ಭರ್ಜರಿ ಜಯಗಳಿಸಿ ನಾಲ್ಕನೇ ಬಾರಿ ಅಧಿಕಾರಕ್ಕೇರಿದ್ದಾರೆ.

ಈ ಹಿನ್ನೆಲೆಯಲ್ಲಿ ನೆನ್ನೆ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಸೇರಿದಂತೆ ಅನೇಕ ಗಣ್ಯರ ಸಾಕ್ಷಿಯಾಗಿದ್ದಾರೆ.

ಈ ಕಾರ್ಯಕ್ರಮದ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. 

ಈ ವಿಡಿಯೋ ಶೇರ್ ಮಾಡಿರುವ ನಟ ಪ್ರಕಾಶ್‌ ರಾಜ್‌  “ಅತಿ ವಿನಯಂ ದೂರ್ತ ಲಕ್ಷಣಂ” ಮೋದಿ ಅವರನ್ನು ಎಂದು ಟೀಕಿಸಿದ್ದಾರೆ.

ಎನ್‌ಡಿಎ ಮೈತ್ರಿಗೆ ಸಂಬಂಧಿಸಿದಂತೆ ಮುಂಬೈ ಬಿಜೆಪಿ ಸಹ ಸಂಚಾಲಕಿ ಪಲ್ಲವಿ ಸಿಟಿ ಟ್ವಿಟರ್ ಬರೆದುಕೊಂಡು, ದೃಢವಾದ ಸ್ಥಿರ ಮೈತ್ರಿ ಹೇಗಿರುತ್ತದೆ. ಆಂಧ್ರಪ್ರದೇಶದಲ್ಲಿ ಹೊಸ ಯುಗದ ಆರಂಭವಾಗಿದೆ. ಚಂದ್ರಬಾಬು ನಾಯ್ಡು ಹಳೆಯ ಅವಿಭಜಿತ ಆಂಧ್ರ ಪ್ರದೇಶವನ್ನು ಪರಿವರ್ತಿಸಿದ ವ್ಯಕ್ತಿ. ಅವರು ಈಗ ಹೊಸ ಆಂಧ್ರ ಪ್ರದೇಶವನ್ನು ಪರಿವರ್ತಿಸುತ್ತಾರೆ ಎಂದು ಬರೆದಿದ್ದಾರೆ. ಇದರೊಂದಿಗೆ ನರೇಂದ್ರ ಮೋದಿ ಹಾಗೂ ಚಂದ್ರಬಾಬು ನಾಯ್ಡು ಅವರ ಆತ್ಮೀಯತೆಯನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಟ ಪ್ರಕಾಶ್‌ ರಾಜ್‌, ಬಲ್ಲವರು ಹೇಳಿದ್ದಾರೆ.. ಅತಿ ವಿನಯಂ ದೂರ್ತ ಲಕ್ಷಣಂ ಎಂದು ಕಾರ್ಯಕ್ರಮದಲ್ಲಿ ಮೋದಿ ಅವರ ಚಟುವಟಿಕೆಗಳನ್ನು ಟೀಕಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others

HL

others