ದೇವುಡಾ... ಕೋನ್‌ ಐಸ್‌ನಲ್ಲಿತ್ತು ಮಾನವನ ಬೆರಳಿನ ಪೀಸ್..! VIDEO ನೋಡಿ
ದೇವುಡಾ... ಕೋನ್‌ ಐಸ್‌ನಲ್ಲಿತ್ತು ಮಾನವನ ಬೆರಳಿನ ಪೀಸ್..! VIDEO ನೋಡಿ

ಮುಂಬೈ, (ಜೂ.13); ಆರ್ಡರ್ ಮಾಡಿದ ಕಾರಣ ಬಂದ ಐಸ್ ಕ್ರೀಂನಲ್ಲಿ ವ್ಯಕ್ತಿಯೊಬ್ಬನ ಬೆರಳು ಪತ್ತೆಯಾದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ಮಲಾಡ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಆನ್ಲೈನ್ ದಿನಸಿ ವಸ್ತುಗಳನ್ನು ಮನೆಗೆ ಡೆಲಿವರಿ ನೀಡುವ ಜೆಪ್ಟೊ ಆಪ್‌ನಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದ ವೇಳೆ ಮೂರು ಬಟರ್ ಸ್ಕಾಚ್‌ ಐಸ್‌ಕ್ರಿಂ ಅನ್ನು ಕೂಡ ಆರ್ಡರ್ ಮಾಡಿದ್ದಾರೆ.

ಆರ್ಡರ್ ಮಾಡಿದ ನಂತರ ಸ್ವಲ್ಪ ಸಮಯದ ಬಳಿಕ ಮನೆಗೆ ಬಂದ ಬಟರ್ ಸ್ಕಾಚ್‌ ಕೋನ್ ಐಸ್‌ಕ್ರಿಂ ಅನ್ನು ತಿನ್ನಲು ಶುರು ಮಾಡಿದಾಗ ಏನೋ ಗಟ್ಟಿಯಾದ ವಸ್ತು ನಾಲಗೆಗೆ ಸಿಕ್ಕಿದ್ದಂತಾಗಿದೆ.

ಈ ವೇಳೆ ಸರಿಯಾಗಿ ನೋಡಿದಾಗ ಐಸ್‌ಕ್ರೀಂನಲ್ಲಿ 1 ಇಂಚಿನಷ್ಟು ಉದ್ದದ ಬೆರಳು ಪತ್ತೆಯಾಗಿದ್ದು, ಈ ಬಗ್ಗೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಲಾಡ್‌ನ ಪೊಲೀಸರು ಐಸ್‌ಕ್ರೀಂನಲ್ಲಿ ಸಿಕ್ಕ ಬೆರಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು,  ಐಸ್‌ಕ್ರೀಂ ತಯಾರಿಕಾ ಸಂಸ್ಥೆಯನ್ನು ಫೋನ್ ಹಾಗೂ ಇಮೇಲ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದು, ಆದರೆ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others

HL

others

HL

others