NEET ಫಲಿತಾಂಶ ರದ್ದು, ಮರು ಪರೀಕ್ಷೆಗೆ ಆದೇಶ.. ಎಕ್ಸಾಂ ಗೋಲ್‌ಮಾಲ್ ‌ಗೆ ಸುಪ್ರೀಂ ಕೋರ್ಟ್ ಛೀಮಾರಿ
NEET ಫಲಿತಾಂಶ ರದ್ದು, ಮರು ಪರೀಕ್ಷೆಗೆ ಆದೇಶ.. ಎಕ್ಸಾಂ ಗೋಲ್‌ಮಾಲ್ ‌ಗೆ ಸುಪ್ರೀಂ ಕೋರ್ಟ್ ಛೀಮಾರಿ

ನವ ದೆಹಲಿ, (ಜೂ.13): ನೀಟ್ (ಯುಜಿ) ಫಲಿತಾಂಶ ಪ್ರಕಟವಾದಗಿನಿಂದ ವಿವಾದದ ಸುಳಿಯಲ್ಲೇ ಇದ್ದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ನೀಟ್​ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಮೂರು ಅರ್ಜಿಗಳ ವಿಚಾರಣೆ ಇಂದು ನಡೆದಿದೆ. ನೀಟ್ ಪರೀಕ್ಷೆ ನಡೆಸುವ ಸಂಸ್ಥೆಯಾಗಿರುವ ಎನ್​ಟಿಎ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಗ್ರೇಸ್​ ಮಾರ್ಕ್​ಗಳ ಕುರಿತು ಇಂದು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡನೆ ನಡೆಯಿತು.

ಪರೀಕ್ಷೆಯ ರದ್ದತಿ ಹಾಗೂ ಮರು ಪರೀಕ್ಷೆ ಕುರಿತು ಸುಪ್ರೀಂ ವಿಚಾರಣೆ ನಡೆಸಿದ್ದು ಅಂತಿಮವಾಗಿ ಎನ್​ಟಿಎ ನೀಡಿರುವ ಗ್ರೇಸ್​ ಅಂಕಗಳನ್ನು ರದ್ದುಗೊಳಿಸಿ, ಜೂನ್ 23ಕ್ಕೆ ಮರುಪರೀಕ್ಷೆ ನಿರ್ಧಾರ ಕೈಗೊಳ್ಳಲಾಯಿತು.

ಇತ್ತೀಚೆಗೆ ಬಿಡುಗಡೆ ಗೊಂಡ 1,563 ನೀಟ್ (ಯುಜಿ) ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯುವಂತೆ ಆದೇಶಿಸಿರುವ ನ್ಯಾಯಾಲಯ, ಜೂನ್‌ 23 ಕ್ಕೆ ಮರುಪರೀಕ್ಷೆ ನಡೆಸುವಂತೆ ಆದೇಶಿಸಿದೆ.

ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡಿದ್ದವು. ಫಲಿತಾಂಶದಲ್ಲಿಯೂ ಗೋಲ್‌ಮಾಲ್ ‌ ನಡೆದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ತಜ್ಞರು, ಪೋಷಕರು ಹಾಗೂ ಅಭ್ಯರ್ಥಿಗಳು ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

ಈ ಕುರಿತು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಪರೀಕ್ಷಾ ಪ್ರಾಧಿಕಾರಕ್ಕೆ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದೀರಿ. ಇದಕ್ಕೆ ಉತ್ತರ ನೀಡಬೇಕು ಎಂದು ಛೀಮಾರಿ ಹಾಕಿತ್ತು.

ಈಗ ಸುಪ್ರೀಂಕೊರ್ಟ್ ರಜಾ ಕಾಲೀನ ಪೀಠದ ನ್ಯಾಯ ಮೂರ್ತಿಗಳಾದ ವಿಕ್ರಂನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಎದುರು ವಿಚಾರಣೆ ನಡೆಯುತ್ತಿದೆ.

ಪರೀಕ್ಷೆ ಸಮಯದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಅರ್ಜಿಯಲ್ಲಿ ನೀಟ್ (ಯುಜಿ) ಪರೀಕ್ಷೆಗೆ ಒಡಿಶಾ. ಕರ್ನಾಟಕ ಮತ್ತು ಜಾರ್ಖಂಡ್ ‌ನ ಅಭ್ಯರ್ಥಿಗಳು ಗುಜರಾತ್‌ನ ಗೋಧ್ರಾ ಪರೀಕ್ಷಾ ಕೇಂದ್ರವನ್ನು ಆಯ್ದುಕೊಂಡ ಬಗ್ಗೆ ಮಾಹಿತಿ ನೀಡಲಾಗಿತ್ತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

others

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime