ಜಕ್ಕಲಮೊಡಗು ಜಲಾಶಯದ ಕಟ್ಟೆ ಬಿರುಕಿನಿಂದ ಅಪಾಯ‌...!; ಎಚ್ಚೆತ್ತು ಕೊಳ್ಳದಿದ್ದರೆ ಕಾದಿದೆ ಗಂಡಾಂತರ
ಜಕ್ಕಲಮೊಡಗು ಜಲಾಶಯದ ಕಟ್ಟೆ ಬಿರುಕಿನಿಂದ ಅಪಾಯ‌...!; ಎಚ್ಚೆತ್ತು ಕೊಳ್ಳದಿದ್ದರೆ ಕಾದಿದೆ ಗಂಡಾಂತರ

ಚಿಕ್ಕಬಳ್ಳಾಪುರ, (ಜೂ.13): ಚಿಕ್ಕಬಳ್ಳಾಪುರ ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಸುವ ಜಕ್ಕಲಮೊಡಗು ಜಲಾಶಯದಲ್ಲಿ ಕಳೆದ ಬಾರಿ ಮಳೆಗಾಲದಲ್ಲಿ ಉತ್ತಮ ಮಳೆಯಾಗದೆ ಬರ ಆವರಿಸಿ, ಜಲಾಶಯದಲ್ಲಿ ಶೇಖರಣೆಯಾಗಿದ್ದ 58ಅಡಿನೀರು 24 ಅಡಿಗಳಿಗೆ ಕುಸಿತವಾಗಿತ್ತು.

ಮಳೆ ಇಲ್ಲದೆ ಬರ ಕಾಡುತ್ತಿರುವುದು ಒಂದು ಕಡೆಯಾದರೆ, ಎರಡೂ ನಗರಗಳಿಗೆ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯದಲ್ಲಿ ನೀರಿನಮಟ್ಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಇದರಿಂದಾಗಿ ಜಲಾಶಯದ ನೀರನ್ನ ಅವಲಂಬಿತ ಎರಡು ನಗರಗಳ ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ ವರುಣನ ಕೃಪೆಯಿಂದ ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಜನರ ಆತಂಕವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಿದೆ. ಆದರೆ ಮಳೆ ನೀರಿನಿಂದ ಜಕ್ಕಲಮಡುಗ ಜಲಾಶಯದ ಕಟ್ಟೆಯ ಮೇಲ್ಬಾಗದಲ್ಲಿ ಮಣ್ಣು ಕುಸಿಯುತ್ತಿದ್ದೆ ಕಟ್ಟೆಯುದ್ದಕ್ಕೂ ಮಣ್ಣು ಕುಸಿದು ಬಿರುಕುಗಳು ಬಿಟ್ಟಿವೆ. ಇದರಿಂದ ಕಟ್ಟೆ ಕುಸಿಯುವ ಬಿತಿ ಎದುರಾಗಿದೆ.

ಜಲಾಶಯದ ಕೆಳಗೆ ಐದಾರು ಹಳ್ಳಿಗಳು ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗಿ ಕಟ್ಟೆ ಓಡೆಯುವ ಸಾಧ್ಯತೆ ಇದೆ ಎಂದು ಜನ ಭಯಬೀತರಾಗಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಅವಳಿ‌ ನಗರಗಳ ಕುಡಿಯುವ ನೀರಿನ‌ ಏಕೈಕ ಮೂಲವಾದ ಜಕ್ಕಲಮಡಗು ಜಲಾಶಯದಲ್ಲಿ ಗರಿಷ್ಠ 64 ಅಡಿಗಳವರೆಗೂ ನೀರು ಸಂಗ್ರಹವಾಗುತ್ತೆ.ಈಗಾಗಲೇ ಚಿಕ್ಕಬಳ್ಳಾಪುರ ಭಾಗದಲ್ಲಿ ವಾಡಿಕೆ ಮಳೆಗಿಂತ 194 ಎಂಎಂ ಉತ್ತಮ ಮಳೆಯಾಗಿದ್ದು,  ಉತ್ತಮ ಮಳೆಯಿಂದ ಈಗಾಗಲೇ 18 ಅಡಿಯಷ್ಟು ಮಳೆ ನೀರು ಶೇಕಣೆಯಾಗಿದೆ.

ಮಳೆ ನೀರಿನಿಂದ ಕಟ್ಟೆಯ ಮಣ್ಣು ಕುಸಿತವಾಗಿ ಬಿರುಕು ಬಿಟ್ಟಿದೆ. ಸಂಭಂಧ ಪಟ್ಟ ಎರಡೂ ನಗರಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೆ ಮಳೆ ನೀರಿನಿಂದ ಕಟ್ಟೆಯ ಮಣ್ಣು ಕುಸಿತವಾಗಿ ಬಿರುಕು ಬಿಟ್ಟಿರುವ ಜಲಾಶಯದ ಕಟ್ಟೆಯನ್ನು ಸರಿ ಪಡಿಸಬೇಕು ಎಂದು ಚಿಕ್ಕಬಳ್ಳಾಪುರ ನಗರಸಭೆ ಮಾಜಿ ಸದಸ್ಯ ಮಹಾಕಾಳಿ ಬಾಬು ಆಗ್ರಹಿಸಿದ್ದಾರೆ.

ಅಂದಾಜು 90 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಚಿಕ್ಕಬಳ್ಳಾಪುರ ನಗರವು ಹೊಂದಿದೆ. ಸುಮಾರು 9500 ಕೊಳಾಯಿ ಸಂಪರ್ಕಗಳು ಇವೆ.ಇಷ್ಟು ದೊಡ್ಡ ಪ್ರಮಾಣದ ಜನರಿಗೆ ನಿತ್ಯ 5 ಎಂಎಲ್‌ಡಿ ಪ್ರಮಾಣದಲ್ಲಿ ಜಕ್ಕಲ ಮಡುಗು ಜಲಾಶಯದ ನೀರನ್ನು ಪೂರೈಸಲಾಗುತ್ತಿದೆ.1.40ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರ ನಗರದಲ್ಲಿ, 14,500 ಕೊಳಾಯಿ ಸಂಪರ್ಕಗಳು ಇವೆ. ಪ್ರತಿ ದಿನ ನಗರಕ್ಕೆ 13 ಎಂ.ಎಲ್‌.ಡಿ (ದಶಲಕ್ಷ ಲೀಟರ್‌) ನೀರಿನ ಅಗತ್ಯವಿದೆ.

ಇಂತಹ ಅಗತ್ಯಗಳನ್ನು ಪೋರೈಸುತ್ತಿರುವ ಈ ಜಕ್ಕಲ ಮಡುಗು ಜಲಾಶಯದ ಕಟ್ಟೆ ಬಿರುಕು ಬಿಟ್ಟಿರುವುದರಿಂದ ಮತ್ತು ಮುಂದಿನ ದಿನ ಮಾನಗಳಲ್ಲಿ ಹೆಚ್ಚು ಮಳೆ ಆಗುವ ಸಂಭವ ಇರುವುದರಿಂದ ಜಲಾಶಯದ ಕಟ್ಟೆ ಒಡೆದು ಹೋದರೆ. ಅವಳಿ ನಗರಗಳಿಗೆ ಕುಡಿಯಲು ನೀರು ಸಿಗದೆ ತೊಂದರೆ ಯಾಗುವುದಲ್ಲದೇ ಜಲಾಶಯದ ಕೆಳಗಿರುವ ಐದಾರು ಗ್ರಾಮಗಳ ಮನೆಗಳು, ಜಮೀನುಗಳು ಜಲಾವೃತವಾಗಿ ಜನ ಜಾನುವಾರುಗಳು ಅಪಾಯಕ್ಕೆ ಸಿಲುಕಲಿವೆ. ಆದುದರಿಂದ ಕೂಡಲೆ ನಗರಸಭೆ ಜಲಾಶಯದ ಕಟ್ಟೆಯನ್ನು ದುರಸ್ತಿ ಗೊಳಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಮಳೆ‌ ಸುರಿದು ಜಲಾಶಯದ ಕಟ್ಟೆ ಮತ್ತಷ್ಟು ಕುಸಿದು, ಬಿರುಕು ಬಿಟ್ಟಿ ಮುಂದಿನ ದಿನಗಳಲ್ಲಿ ಏನಾದರೂ ಅವಾಂತರ ಆಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others