ಸಚಿವ ಕೃಷ್ಣ ಬೈರೇಗೌಡ ಬೆನ್ನಲ್ಲೆ ಸದ್ದಿಲ್ಲದೆ ದೊಡ್ಡಬಳ್ಳಾಪುರಕ್ಕೆ  ಬಂದ ಡಿಸಿಎಂ ಡಿಕೆ ಶಿವಕುಮಾರ್.. ಕಾರಣವೇನು..?
ಸಚಿವ ಕೃಷ್ಣ ಬೈರೇಗೌಡ ಬೆನ್ನಲ್ಲೆ ಸದ್ದಿಲ್ಲದೆ ದೊಡ್ಡಬಳ್ಳಾಪುರಕ್ಕೆ ಬಂದ ಡಿಸಿಎಂ ಡಿಕೆ ಶಿವಕುಮಾರ್.. ಕಾರಣವೇನು..?

ದೊಡ್ಡಬಳ್ಳಾಪುರ, (ಜೂ.12): ಬೆಂಗಳೂರಿನ ಸುತ್ತಲು ಟೌನ್ ಶಿಪ್ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಅಧಿಕಾರಿಗಳೊಂದಿಗೆ ತಾಲ್ಲೂಕಿನ ಕಸಬಾ ಹೋಬಳಿ ಹಾಗೂ ದೊಡ್ಡಬೆಳವಂಗಲ ಹೋಬಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ಈ ಬಗ್ಗೆ ಮಾಹಿತಿ ನೀಡಿರುವ ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಬೆಂಗಳೂರಿನಲ್ಲಿ ವಸತಿಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜಧಾನಿಯ ಸುತ್ತಲಿನ ತಾಲ್ಲೂಕುಗಳಲ್ಲಿ ಹೈಟೆಕ್ ಸೌಲಭ್ಯಗಳನ್ನು ಒಳಗೊಂಡ ಟೌನ್ಶಿಪ್ಗಳನ್ನು ನಿರ್ಮಿಸುವ ಸರ್ಕಾರದ ಯೋಜನೆಯ ಭಾಗವಾಗಿ ಕಸಬಾ ಹೋಬಳಿಯ ರಾಜಘಟ್ಟ, ತಿಮ್ಮಸಂದ್ರ ಗ್ರಾಮ, ಹಾಗೆಯೇ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆಗೊಲ್ಲಹಳ್ಳಿ, ಸೊಣ್ಣೇನಹಳ್ಳಿ ಗ್ರಾಮಗಳ ಸಮೀಪ ಸ್ಥಳ ವೀಕ್ಷಣೆ ಮಾಡಲಾಗಿದೆ ಎಂದರು. 

ಈ ಹಿಂದಿನ ಸರ್ಕಾರದಲ್ಲಿ ಬೆಂಗಳೂರು ಸುತ್ತಲಿನ ತಾಲ್ಲೂಕುಗಳನ್ನು ಹಾದುಹೋಗುವಂತೆ ರಿಂಗ್ ರಸ್ತೆ ನಿರ್ಮಾಣಕ್ಕೆ ನೀಲನಕ್ಷೆ ಗುರುತಿಸಲಾಗಿತ್ತು. ಈ ರಿಂಗ್ ರಸ್ತೆಯು ರಾಮನಗರ ಜಿಲ್ಲೆಯ ಸಾತನೂರು ಸಮೀಪದಿಂದ ಪ್ರಾರಂಭವಾಗಿ ಬಿಡದಿ, ಮಾಗಡಿ, ಸೋಲೂರು, ದಾಬಸ್ಪೇಟೆ, ದೊಡ್ಡಬಳ್ಳಾಪುರ,ದೇವನಹಳ್ಳಿ, ನಂದಗುಡಿ, ಆನೇಕಲ್ ತಾಲ್ಲೂಕಿನ ಮೂಲಕ ಮತ್ತೆ ಸಾತನೂರು ಸೇರಲಿದೆ ಎಂದರು. 

ರಿಂಗ್ ರಸ್ತೆ ನಿರ್ಮಾಣದಿಂದ ಅಂತರ ರಾಜ್ಯಗಳ ಹೆದ್ದಾರಿ, ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಬಹುದಾಗಿದೆ. ನೂತನ ಟೌನ್ ಶಿಪ್ಗಳನ್ನು ಸಹ ರಿಂಗ್ ರಸ್ತೆಗೆ ಸಮೀಪದಲ್ಲೇ ನಿರ್ಮಿಸುವ ಉದ್ದೇಶದೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಯಾವುದನ್ನು ಇನ್ನು ಅಂತಿಮಗೊಳಿಸಿಲ್ಲ. ಟೌನ್ಶಿಪ್ ನಿರ್ಮಾಣದ ಸಾಧ್ಯತೆ, ಅನುಕೂಲಗಳ ಕುರಿತಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದಿದ್ದಾರೆ.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

others

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime