ಸಹಕಾರ ಸಂಘ ಚುನಾವಣೆ ರದ್ದತಿಗೆ ಖಂಡನೆ: ನಿಖಿಲ್, ಪೊಲೀಸರ ನಡುವೆ ತಳ್ಳಾಟ| ವಿಡಿಯೋ ನೋಡಿ
ಸಹಕಾರ ಸಂಘ ಚುನಾವಣೆ ರದ್ದತಿಗೆ ಖಂಡನೆ: ನಿಖಿಲ್, ಪೊಲೀಸರ ನಡುವೆ ತಳ್ಳಾಟ| ವಿಡಿಯೋ ನೋಡಿ

ರಾಮನಗರ, (ಜುಲೈ.10): ತಾಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಚುನಾವಣಾಧಿಕಾರಿ ದಿಢೀರ್ ರದ್ದುಪಡಿಸಿದ್ದನ್ನು ವಿರೋಧಿಸಿ, ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಯುವ ಘಟಕದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ತಡೆಬೇಲಿ ಭೇದಿಸಿ ನುಗ್ಗಿದ ಕಾರ್ಯಕರ್ತರು: ರಾಮನಗರದ ಕಂದಾಯ ಭವನದ ಪ್ರವೇಶದ್ವಾರಕ್ಕೆ ಅಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್‌ಗಳನ್ನು ಸರಿಸಿ ನಿಖಿಲ್ ಹಾಗೂ ಇತರ ಮುಖಂಡರು ಒಳನುಗ್ಗಲು ಮುಂದಾದರು.

ಪೊಲೀಸರು ಅವರನ್ನು ತಡೆಯಲು ಯತ್ನಿಸಿದರೂ ಬ್ಯಾರಿಕೇಡ್ ತಳ್ಳಿ ಮುಂದೆ ಬಂದರು. ಆಗ ಪೊಲೀಸರನ್ನು ಹಿಂದಕ್ಕೆ ನೂಕಿದರು. ಆಗ ಸಂಭವಿಸಿದ ನೂಕುನುಗ್ಗಲಿನಲ್ಲಿ ಪ್ರವೇಶದ್ವಾರದ ಗಾಜು ಒಡೆದು ಪುಡಿಯಾಯಿತು.

ತಳ್ಳಾಟದಲ್ಲಿ ನಿಖಿಲ್ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಡಿವೈಎಸ್ಪಿ ದಿನಕರ ಶೆಟ್ಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಿಖಿಲ್ ಅವರನ್ನು ಸಮಾಧಾನಪಡಿಸಿದರು.

ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿಖಿಲ್ ಕಂದಾಯ ಭವನದ ಪ್ರವೇಶದ್ವಾರದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others