ನವದೆಹಲಿ, (ನ.20); ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಇಂದು ನಡೆದಿದ್ದು, ಅಂತಿಮ ಹಣಾಹಣಿಯಲ್ಲಿ ಭಾರತ ಸೋತಿದ್ದು, ವಿಶ್ವಕಪ್ ಆಸ್ಟ್ರೇಲಿಯಾದ ಪಾಲಾಗಿದೆ.
ಇನ್ನು ಭಾರತ ಇದಕ್ಕೂ ಹಿಂದಿನ ಹತ್ತೂ ಪಂದ್ಯದಲ್ಲಿ ಗೆದ್ದರು, ಫೈನಲ್ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ ಟೀಮ್ ಇಂಡಿಯಾ ತಂಡವನ್ನು ಸಂತೈಸುವಂಥ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಮಾಡಿರುವ ರಾಹುಲ್ ಗಾಂಧಿ, ಟೀಮ್ ಇಂಡಿಯಾ.. ನೀವು ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿದ್ದೀರಿ. ಸೋಲು-ಗೆಲುವಿನಲ್ಲೂ ನಾವು ನಿಮ್ಮನ್ನು ಒಂದೇ ರೀತಿಯಲ್ಲಿ ಪ್ರೀತಿಸುತ್ತೇವೆ ಮತ್ತು ನಾವು ಮುಂದಿನ ಸಲ ಗೆಲ್ಲುತ್ತೇವೆ ಎಂದಿರುವ ಎಂದಿದ್ದಾರೆ. ವಿಶ್ವಕಪ್ ಗೆಲುವಿಗಾಗಿ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು ಎಂದೂ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
agriculture
others
others
politics
politics