ದೊಡ್ಡಬಳ್ಳಾಪುರ: ಗ್ಯಾಸ್ ಪೈಪ್ ಲೀಕ್, ಆಟೋ ಭಸ್ಮ..!!
ದೊಡ್ಡಬಳ್ಳಾಪುರ: ಗ್ಯಾಸ್ ಪೈಪ್ ಲೀಕ್, ಆಟೋ ಭಸ್ಮ..!!

ದೊಡ್ಡಬಳ್ಳಾಪುರ, (ಜೂ.09): ನಗರದ ಜಿ.ರಾಮೇಗೌಡ ವೃತ್ತದ ಸಮೀಪದಲ್ಲಿ ಪ್ಯಾಸೆಂಜರ್ ಆಟೋದಲ್ಲಿ ಅಳವಡಿಸಿದ್ದ ಗ್ಯಾಸ್ ಲೀಕ್ ಆದ ಪರಿಣಾಮ ಬೆಂಕಿ ತಗುಲಿ ಆಟೋ ಸುಟ್ಟು ಭಸ್ಮವಾಗಿದೆ.

ಜಿ.ರಾಮೇಗೌಡ ವೃತ್ತದ ಬಳಿಯಿರುವ ಗ್ಯಾಸ್ ಬಂಕ್ ನಿಂದ ಹೊರಗಡೆ ಘಟನೆ ನಡೆದಿದ್ದು, ಶಿವಕುಮಾರ ಎನ್ನುವವರ ಆಟೋಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಭಸ್ಮವಾಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಂಕ್ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--