ದೊಡ್ಡಬಳ್ಳಾಪುರ, (ಫೆ.07): ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಸಮರ್ಪಕ ವ್ಯವಸ್ಥೆಗೆ ಮುಂದಾಗದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳ ಲೋಪದಿಂದಾಗಿ, ರೈತರು ಕಳೆದ ಕೆಲ ದಿನಗಳಿಂದ ರೈತರು ಹಗಲು, ರಾತ್ರಿ ಎನ್ನದೆ ರಸ್ತೆಯಲ್ಲಿ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ತಾಲ್ಲೂಕಿನ ಗೌರಿಬಿದನೂರು ರಸ್ತೆಯ ಗುಂಡಮಗೆರೆ ಕ್ರಾಸ್ ಸಮೀಪ ಇರುವ ಆಹಾರ ನಿಗಮನದ ಗೋದಾಮುಗಳಲ್ಲಿ ರಾಗಿಯನ್ನು ದಾಸ್ತಾನು ಮಾಡಲಾಗುತ್ತಿದೆ.
ನಗರದಿಂದ ಸುಮಾರು 9 ಕಿ.ಮೀ ದೂರದ ಇಲ್ಲಿಗೆ ರೈತರು ಟ್ರ್ಯಾಕ್ಟರ್'ಗಳಲ್ಲಿ ಒಂದು ದಿನ ಮುಂಚಿತವಾಗಿಯೇ ರಾಗಿ ಚೀಲಗಳನ್ನು ತಂದು ಸಾಲುಗಟ್ಟಿ ಕಾದು ನಿಲ್ಲಿಬೇಕಿದೆ. ರಾಗಿ ಖರೀದಿ ಕೇಂದ್ರದಲ್ಲಿ 07 ಕಡೆ ದಾಸ್ತಾನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದ್ದರೂ, ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ, ಟ್ರ್ಯಾಕ್ಟರ್ಗಳಿಂದ ರಾಗಿ ತುಂಬಿದ ಚೀಲಗಳನ್ನು ಗೋದಾಮಿನಲ್ಲಿ ಇಳಿಸಿಕೊಳ್ಳುವುದು ತಡವಾಗುತ್ತಿದೆ.
ಈ ಕುರಿತಂತೆ ರೈತರ ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ತಹಶೀಲ್ದಾರ್ ಮೋಹನಕುಮಾರಿ ಸ್ಥಳಕ್ಕೆ ಭೇಟಿ ರೈತರ ಸಮಸ್ಯೆ ಆಲಿಸಿ, ಹೆಚ್ಚುವರಿ ಕೂಲಿ ಕಾರ್ಮಿಕರ ನೇಮಿಸಿ ರೈತರಿಗೆ ತೊಂದರೆ ಉಂಟಾಗದಂತೆ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದ್ದರು.
ಆದರೆ ಜಿಲ್ಲಾಧಿಕಾರಿ ಅವರ ಈ ಸೂಚನೆಗೆ ಕನಿಷ್ಠ ಬೆಲೆ ನೀಡದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ಹೆಚ್ಚುವರಿ ಕೂಲಿ ಕಾರ್ಮಿಕರನ್ನು ನೇಮಿಸದ ಕಾರಣ ಟ್ರಾಕ್ಟರ್ ಗಳಲ್ಲಿ ರಾಗಿ ತಂದಿರುವ ರೈತರು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಗಿದೆ.
ಇನ್ನೂ ಫೆಬ್ರವರಿ 05 ರಂದು ಪ್ರಕಟಣೆ ನೀಡಿದ್ದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು, ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಸಲು ದೊಡ್ಡಬಳ್ಳಾಪುರದ ಗುಡುಮಗೆರೆ ಕ್ರಾಸ್ ಬಳಿಯ ಕರ್ನಾಟಕ ನ ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಸ್ಥಾಪಿಸಲಾಗಿರುವ ಖರೀದಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರಾಗಿ ತರುತ್ತಿರುವುದರಿಂದ ಜನಸಂದಣಿ ಉಂಟಾಗುತ್ತಿದೆ.
ನೋಂದಣಿ ಸಮಯದಲ್ಲಿ ನೀಡಿರುವ ನಿಗದಿತ ದಿನಾಂಕಗಳಂದೇ ರೈತರು ತಮ್ಮ ರಾಗಿ ತರಬೇಕು. ಎಲ್ಲಾ ನೋಂದಾಯಿತ ರೈತರ ರಾಗಿ ದಾಸ್ತಾನನ್ನು ತೆಗೆದುಕೊಳ್ಳಲಾಗುವುದು.
ರೈತಬಾಂಧವರು ಯಾವುದೇ ಆತಂಕಕ್ಕೆ ಒಳಗಾಗದೇ ತಮಗೆ ನೀಡಿರುವ ದಿನಾಂಕಗಳಂದೇ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು.
ಹೆಚ್ಚಿನ ವಿವರಗಳಿಗೆ 99640 90996, 90368 78847. ಅಥವಾ 63660 21925 ಖರೀದಿ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ ರೈತರು ಈ ಸಂಖ್ಯೆಗೆ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಅಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಇಲಾಖೆಗಳು ನೀಡುವ ಪ್ರಕಟಣೆಯಲ್ಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಪ್ರತಿಕ್ರಿಯೆ ದೊರಕುತ್ತಿಲ್ಲವಾಗಿದ್ದು, ಕಾಟಾಚಾರಕ್ಕೆ ದೂರವಾಣಿ ಸಂಖ್ಯೆ ನೀಡುತ್ತಾರೆ ಎಂಬ ಆರೋಪ ವ್ಯಾಪಕವಾಗಿದೆ.
ಇನ್ನೂ ಸೋಮವಾರ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳ ಲೋಪವಿಲ್ಲ, ರೈತರೆ ಸೂಚಿಸಿದ ದಿನಾಂಕ ಇಲ್ಲವಾದರೂ ಸುಮ್ಮನೆ ಸಾಲುಗಟ್ಟಿ ನಿಂತಿದ್ದಾರೆ ಎಂಬಂತೆ ಮಾತನಾಡಿ, ಜಿಲ್ಲಾಧಿಕಾರಿ ಸೂಚನೆ ಅನ್ವಯ 50ಕೂಲಿ ಕಾರ್ಮಿಕರ ಕರೆಸಲಾಗಿದೆ ಶೀಘ್ರದಲ್ಲೇ ಮತ್ತೊಂದು ಖರೀದಿ ಕೇಂದ್ರ ತೆರೆಯುತ್ತೇವೆ. ದಿನ ನಿತ್ಯ 200 ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ ಎಂದಿದ್ದಾರೆ.
ಮಂಗಳವಾರ ಬೆಳಗ್ಗೆ ಖರೀದಿ ಕೇಂದ್ರದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗೂ ಟ್ರಾಕ್ಟರ್ ಗಳು ಸಾಲುಗಟ್ಟಿ ನಿಂತಿದ್ದು, ಜಿಲ್ಲಾಧಿಕಾರಿ ಸೂಚನೆಯಂತೆ ಹೆಚ್ಚುವರಿ ಕೂಲಿ ಕಾರ್ಮಿಕರ ನೇಮಿಸದ ಹೊರತು ಸಮಸ್ಯೆ ಬಗೆ ಹರಿಯುವುದಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
-->Latest News
others
others
others
politics
politics