ಚಿಕ್ಕಮಧುರೆ ಶ್ರೀ ಶನಿಮಹಾತ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ..!!
ಚಿಕ್ಕಮಧುರೆ ಶ್ರೀ ಶನಿಮಹಾತ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ..!!

ದೊಡ್ಡಬಳ್ಳಾಪುರ, (ಜ.23): ತಾಲೂಕಿನ ಚಿಕ್ಕಮಧುರೆ ಶ್ರೀ ಶನಿಮಹಾತ್ಮ ದೇವಾಲಯಕ್ಕಿಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿಶೇಷ ಪೂಜೆ ಸಲ್ಲಿಸಿದರು.

ಸೋಮವಾರ ಮಧ್ಯಾಹ್ನ ದೇವಾಲಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪೂಜೆ ನೆರವೇರಿಸಿದರು.

ಇದೇ ವೇಳೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ಅವರು. ಮನೆ ಮನೆಗೆ ಭೇಟಿ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಪಟ್ಟಿಯುಳ್ಳ ಕರಪತ್ರಗಳನ್ನು ವಿತರಿಸಿದರು.

ಈ ವೇಳೆ ಮಾತಾನಾಡಿದ ಅವರು, ಚೀನಾ ಮಾಡಿದ ತಪ್ಪಿಗೆ ಇಡೀ ಪ್ರಪಂಚವೇ ಕರೊನಾ ಸೋಂಕಿನಿಂದ ಬಳಲುವಂತಾಯಿತು. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಜನತೆಗೆ ಉಚಿತ ಲಸಿಕೆ ವಿತರಿಸಿತು. ಈ ವೇಳೆ ಕಾಂಗ್ರೆಸ್, ಜೆಡಿಎಸ್ ಎಂದು ನೋಡಲಿಲ್ಲ. ಹೀಗೆ ಹೇಳುತ್ತಾ ಓದ್ರೆ ಮೋದಿ ಸರ್ಕಾರದ ಕಾರ್ಯಗಳನ್ನು ನೂರು ಹೇಳಬಹುದು. ಆದರೆ ಒಂದೇ ಪ್ರಶ್ನೆ ಕಾಂಗ್ರೆಸ್ ಎಂದರೆ ನಿಮ್ಮ ಕಣ್ಣ ಮುಂದೆ ಬುರುವುದು ಏನು..? ಕೇವಲ ಭ್ರಷ್ಟಾಚಾರ. ಕಾಮನ್‌ವೆಲ್ತ್ ಹಗರಣ, 2ಜಿ, 3ಜಿ ಹಗರಣ ಮಾತ್ರ.

ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನದಟ್ಟು ಮಾಡಿಕೊಂಡು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ಮಂಡಲಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್.ಗೋವಿಂದರಾಜು(ಗೋಪಿ), ತಾಲೂಕು ಅಧ್ಯಕ್ಷ ಟಿ.ಎನ್.ನಾಗರಾಜು, ನಗರ ಘಟಕದ ಅಧ್ಯಕ್ಷ ಹೆಚ್.ಎಸ್‌.ಶಿವಶಂಕರ್, ಮುಖಂಡರಾದ ಸಾರಥಿ ಸತ್ಯಪ್ರಕಾಶ್, ಟಿ.ವಿ.ಲಕ್ಷ್ಮೀನಾರಾಯಣ್, ಧೀರಜ್ ಮುನಿರಾಜು, ಶಿವಾನಂದ ರೆಡ್ಡಿ, ಮುದ್ದಪ್ಪ, ಲಗ್ಗೆರೆ ನಾರಾಯಣಸ್ವಾಮಿ, ಸುಧಾ, ರಾಂಕಿಟ್ಟಿ, ಅಶ್ವಥ್ ನಾರಾಯಣಗೌಡ, ವಾಣಿ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--