ದೊಡ್ಡಬಳ್ಳಾಪುರ, (ಜ.23): ಬಿಎಂಟಿಸಿ ಬಸ್ಸುಗಳಲ್ಲಿ ಅಳವಡಿಸಿರುವ ಫಾಸ್ಟ್ಟ್ಯಾಗ್'ಗಳಲ್ಲಿ ಗೋಲ್ ಮಾಲ್ ಆರೋಪದ ಹಿನ್ನೆಲೆಯಲ್ಲಿ, ಟೋಲ್ ಸಿಬ್ಬಂದಿ ಬಸ್ಸುಗಳನ್ನು ತಡೆದ ಪರಿಣಾಮ ಪ್ರಯಾಣಿಕರು ಪರದಾಡುವಂತಾದ ಘಟನೆ ತಾಲೂಕಿನ ಹೊರವಲಯದಲ್ಲಿರುವ ಮಾರಸಂದ್ರ ಬಳಿಯ ಟೋಲ್ ಬಳಿ ನಡೆದಿದೆ.
ಬಿಎಂಟಿಸಿ ಬಸ್ಸುಗಳಲ್ಲಿ ಅಳವಡಿಸಿರುವ ಫಾಸ್ಟ್ಟ್ಯಾಗ್'ಗಳಲ್ಲಿ ಹಣ ಕಡಿತವಾಗಲು ಬಸ್ಸುಗಳ ನೊಂದಣಿ ಸಂಖ್ಯೆ ವೆತ್ಯಾಸವಾಗುತ್ತಿದೆ. ಈ ಕುರಿತಂತೆ ಅನೇಕ ಬಾರಿ ಸಂಸ್ಥೆಗೆ ಸೂಚನೆ ನೀಡಿದರು ಸಮಸ್ಯೆ ಬಗೆಹರಿಸಲು ಮುಂದಾಗದ ಕಾರಣ ಇಂದು ಬಸ್ಸುಗಳನ್ನು ತಡೆಯಲಾಗಿತ್ತು.
ಬಸ್ಸುಗಳನ್ನು ತಡೆದ ಕಾರಣ ಕೆರಳಿದ ಪ್ರಯಾಣಿಕರು ಹಾಗೂ ಬಸ್ಸಿನ ಚಾಲಕ - ನಿರ್ವಾಹಕರು ಟೋಲ್ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದರು. ವಿಐಪಿಗಳಿಗಾದರೆ ಪುಕ್ಕಟ್ಟೆ ಬಿಡ್ತಿರಾ ಸಾರ್ವಜನಿಕರ ಬಸ್ ತಡಿಯುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಟೋಲ್ ವ್ಯವಸ್ಥಾಪಕ ರವಿ ಬಾಬು, ಟೋಲ್ ಹೆಸರಲ್ಲಿ ಪ್ರಯಾಣಿಕರಿಂದ ಹಣ ಪಡೆಯುತ್ತಿರುವ ಬಿಎಂಟಿಸಿ ಟೋಲ್ ಹಣ ಕಡಿತವಾಗಲು ನಂಬರ್ ವೆತ್ಯಾಸ ಮಾಡುತ್ತಿದೆ. ಅಲ್ಲದೆ ಒಂದೇ ಫಾಸ್ಟ್ಟ್ಯಾಗ್ ಬಳಸಿ ಅನೇಕ ಬಸ್ಸುಗಳು ಸಂಚರಿಸುತ್ತಿವೆ. ಫಾಸ್ಟ್ಟ್ಯಾಗ್ ಒಂದಕ್ಕೆ ನೊಂದಣಿಯಾದರೆ ಅದೇ ವಾಹನ ಸಂಚರಿಸಬೇಕು. ಆದರೆ ಇತ್ತೀಚೆಗೆ ಕೆಲವೇ ನಿಮಿಷಗಳಲ್ಲಿ ಒಂದೇ ಫಾಸ್ಟ್ಟ್ಯಾಗ್ ಹೆಸರಲ್ಲಿ ಅನೇಕ ಬಸ್ಸುಗಳು ಸಂಚರಿಸಿವೆ.
ಒಂದು ವಾಹನದ ಫಾಸ್ಟ್ಟ್ಯಾಗ್ ಮತ್ತೊಂದು ವಾಹನಕ್ಕೆ ಬರಲು ಹೇಗೆ ಸಾಧ್ಯ..? ಇವರು ಬೇರೆ ಬಸ್ಸಿನ ಟಿಕೆಟ್ ತೋರಿಸಿದರೆ ಪ್ರಯಾಣಿಸಲು ಬಿಡುವರೆ ಎಂದು ತಿರುಗೇಟು ನೀಡಿದರು.
ನಂತರ ಸ್ಥಳಕ್ಕೆ ಬಂದ ಬಿಎಂಟಿಸಿ ವ್ಯವಸ್ಥಾಪಕ, ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಒಂದು ಸಮಯಾವಕಾಶ ಕೋರಿದರು. ಆದರೆ ಇದಕ್ಕೆ ಒಪ್ಪದ ಟೋಲ್ ವ್ಯವಸ್ಥಾಪಕ ಒಂದು ಶಿಪ್ಟ್ ಅವಕಾಶ ನೀಡುವುದಾಗಿ ಹೇಳಿದರು.
ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಬಸ್ಸುಗಳು ತೆರಳಲು ಅವಕಾಶ ಕಲ್ಪಿಸಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
Latest News
agriculture
others
others
others
others