ಕೊಪ್ಪಳ, (ಸೆ.05); ಜಿಲ್ಲೆಯ ಸದಸ್ಯತ್ವ ನೊಂದಣಿ ಹಾಗೂ ಬೂತ್ ಸಮಿತಿಯ ಅಭಿಯಾನ ಕಾರ್ಯಾಗಾರ ಸಮಾರಂಭಕ್ಕೆ ಭೇಟಿ ಕೊಟ್ಟಿದ್ದೇವೆ. ರಾಜ್ಯದ 31 ಜಿಲ್ಲೆಗಳಲ್ಲೂ ಸದಸ್ಯತ್ವ ನೊಂದಣಿ ಮತ್ತು ಬೂತ್ ಮಟ್ಟದ
ಸಮಿತಿ ರಚನೆ ಆಗಬೇಕು ಅಂತ ಈ ಹಿನ್ನಲೆಯಲ್ಲಿ ರಾಜ್ಯ ಪ್ರವಾಸ ಶುರು ಮಾಡಿದ್ದೇನೆ ಎಂದು ಜೆಡಿಎಸ್ ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕೊಪ್ಪಳ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಜನತಾದಳ ಅಂದ್ರೆ ಜನತಾ ಪರಿವಾರ ಮಾಜಿ ದೇವೇಗೌಡರು ಮುಖ್ಯಮಂತ್ರಿಗಳಾದಂತ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಶಾಸಕರನ್ನು ಗೆದ್ದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಬಲಿಷ್ಠವಾಗಿದೆ. ಉತ್ತರ ಕರ್ನಾಟಕದಲ್ಲೂ ನಮಗೆ ಕೊಪ್ಪಳ, ರಾಯಚೂರು, ಬೀದರ್, ಬಿಜಾಪುರ, ಬಳ್ಳಾರಿ ಇರಬಹುದು ನಮ್ಮದೇ ಆದ ಶಕ್ತಿ ಇದೇ.ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಣ್ಣ ಅವರು ಕೊಡುಗೆ ಈ ರಾಜ್ಯಕ್ಕೆ ಈ ದೇಶಕ್ಕೆ ಕೊಟ್ಟಿದ್ದಾರೆ. ಈ ಭಾಗದಲ್ಲಿ ನೀರಾವರಿ ಯೋಜನೆ ಜನ ಮನಸ್ಸಿನಲ್ಲಿ ಇದೆ.ಇವತ್ತು ಪಕ್ಷವನ್ನ ತಳಮಟ್ಟದಿಂದ ಬಲಪಡಿಸಬೇಕು ಎಂದರು..
31 ಜಿಲ್ಲೆಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತೇವೆ: ಕುಮಾರಣ್ಣ ಅವರು ಕೇಂದ್ರ ಸಚಿವರಾದ ಬಳಿಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಪ್ರಾರಂಭವಾಗಿದೆ. ಇವೆಲ್ಲವನ್ನೂ ಕೂಡ ಗಮನಿಸಿ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರನ್ನ ಗುರುತಿಸುವ ಪ್ರಾಮಾಣಿಕ ಕೆಲಸ ಪಕ್ಷ ಮಾಡುತ್ತೆ ಎಂದರು..ರಾಜ್ಯದ 31 ಜಿಲ್ಲೆಗಳಲ್ಲಿ ಕೂಡ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಂತ ಪ್ರಾಮಾಣಿಕ ಕೆಲಸ ಮಾಡುತ್ತೇವೆ.
ರಾಜ್ಯ ಅಂದ ಮೇಲೆ ಎಲ್ಲವೂ ಒಂದೇ: ಇನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ನಮಗೆ ರಾಜ್ಯ ಅಂದ ಮೇಲೆ ಎಲ್ಲವೂ ಒಂದೇ, ಸಮಸ್ಯೆಗಳು ಆ ಜಿಲ್ಲೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಇರುವಂತ ಸಮಸ್ಯೆಗಳನ್ನ ಮಾತ್ರ ಉದ್ದೇಶಿಸಿ ಮಾತನಾಡುವಂತದಲ್ಲ, ಸಮಸ್ಯೆಗಳು ಉದ್ಭವವಾದಂತ ಸಂದರ್ಭದಲ್ಲಿ ನಮ್ಮ ನಾಯಕರುಗಳಿಗೆ, ನಮ್ಮ ನಾಯಕರು ತಾಕಿತನ್ನ ಮಾಡಿದ್ದಾರೆ ಯಾವುದೇ ಸಮಸ್ಯೆ ಇರಬಹುದು ಜಿಲ್ಲಾ ಮಟ್ಟದ,ತಾಲೂಕು ಮಟ್ಟದ ಸಮಸ್ಯೆಗಳಿಗೆ ಸ್ಪಂದಿಸುವಂತ ಪ್ರಾಮಾಣಿಕ ಕೆಲಸ ಸದನದ ಒಳಗಡೆ ಸದನದ ಒಳಗಡೆ ನಮ್ಮ ಎಲ್ಲ ಹಿರಿಯ ಮುಖಂಡರುಗಳು ರೈತರ ಪರ ಸದಾ ಕಾಲ ಧ್ವನಿ ಎತ್ತಿದ್ದೇವೆ ಎಂದರು.
ಪಾದಯಾತ್ರೆ ಯಶಸ್ವಿ ಆಗಿದೆ: ಪಾದಯಾತ್ರೆ ಯಶಸ್ವಿ ಆಗಿಲ್ಲ ಅನ್ನುವ ವಿಚಾರಕ್ಕೆ ಮಾತನಾಡಿದ ಅವರು ಪಾದಯಾತ್ರೆಯಲ್ಲಿ ನಮ್ಮ ಜತೆ ಜನಸಾಗರ ಸೇರಿತ್ತು. ರಾಮನಗರ,ಮಂಡ್ಯ,ಮೈಸೂರು ಒಟ್ಟು 121 ಕಿಲೋಮೀಟರ್ ಪಾದಯಾತ್ರೆಯಿಂದ ಏನು ಮಾಡಿದ್ದೇವೆ ಎಂದು ಮಾಧ್ಯಮದಲ್ಲಿ ನೋಡಿದ್ದೀರಿ.ಈ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ಸಹಸ್ತ್ರರು ಸಂಖ್ಯೆನಲ್ಲಿ ರೈತರು, ಹಲವಾರು ಸಂಘಟನೆಗಳು ನಮ್ಮ ಜೊತೆಯಲ್ಲಿ ಬೆಂಬಲವಾಗಿ ನಿಂತಿರುವ ಸಾಕ್ಷಿ ಇದೆ. ಆಗಾಗಿ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾನೂನು ಎಲ್ಲರಿಗೂ ಒಂದೇ: ದರ್ಶನ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಅವರು, ಈ ಬಗ್ಗೆ ಹೆಚ್ಚು ಮಹತ್ವ ಕೊಡುವತ್ತದಲ್ಲ. ಆದರೆ, ಕಾನೂನು ಎಲ್ಲರಿಗೂ ಒಂದೇ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಹಾಗಾಗಿ ಈ ಸಂವಿಧಾನದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಕಾನೂನು ರಚನೆ ಮಾಡಿರುತ್ತಾರೆ. ಎಲ್ಲರಿಗೂ ಕೂಡ ಕಾನೂನು ಒಂದೇ. ಜೈಲಿನ ಒಳಗಡೆ ತಾರತಮ್ಯ ನಡೆದಿದೆ ಅನ್ನುವುದು ಬೆಳಕಿಗೆ ಬಂದಿದೆ. ಇವೆಲ್ಲವನ್ನು ಕೂಡ ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳು ಈ ರೀತಿ ಮುಂದಿನ ದಿನಗಳಲ್ಲಿ ಆಗಬಾರದು,ಮುನ್ನೆಚ್ಚರಿಕೆವಹಿಸಿ ಕೆಲಸಮಾಡಿ ಎಂದರು.
ಚನ್ನಪಟ್ಟಣದಲ್ಲಿ ಕಾರ್ಯಕರ್ತರಿಗೆ ಟಿಕೆಟ್: ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡ್ತೀನಿ ಅಂತ ಎಂದು ಕೂಡ ಬಹಿರಂಗವಾಗಿ ನಾನು ಮಾತನಾಡಿಲ್ಲ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಣ್ಣ ಅವರು ಪ್ರತಿನಿಧಿಸಿದಂತ ಕ್ಷೇತ್ರ, ಅನಿರೀಕ್ಷಿತ ರಾಜಕಾರಣದ ಬೆಳವಣಿಗೆಗಳಿಂದ ಕೇಂದ್ರದ ನಾಯಕರು ದೆಹಲಿಗೆ ಹೋದರು.
ನಾನು ನಿರಂತರವಾಗಿ ಕ್ಷೇತ್ರದಲ್ಲಿ ಭೇಟಿಯನ್ನು ಕೊಡುತ್ತಿದ್ದೇನೆ. ಪ್ರತಿ ಪಂಚಾಯಿತಿ ಮಟಕ್ಕೆ ಭೇಟಿ ನೀಡಿ. ಮುಖಂಡರುಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದ್ದೇನೆ. ಇವೆಲ್ಲವೂ ಕೂಡ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಅಂತಿಮವಾಗಿ NDA ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದರು. ಕ್ಷೇತದಲ್ಲಿ ನಿಷ್ಠವಂತ ಕಾರ್ಯಕರ್ತರಿಗೆ ಟಿಕೆಟ್ ಎಂದರು .ನಾವು ಒಟ್ಟಾಗಿ ಇದ್ದವೇ, ಒಗ್ಗಟ್ಟಾಗಿ, ಒಟ್ಟಾರೆಯಾಗಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ವನ್ನು ದೂರವಿಡುವುದಕ್ಕೆ NDA ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದೂವರೆ ವರ್ಷ ಆಗಿದೆ.5 ಗ್ಯಾರಂಟಿಗಳ ಹೆಸರಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. 5 ಗ್ಯಾರಂಟಿಗಳನ್ನ ಇದುವರೆಗೂ ಜನಗಳಿಗೆ ಕೊಟ್ಟಿಲ್ಲ.ರಾಜ್ಯಗಳಲ್ಲಿ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯಗಳ ಪರಿಸ್ಥಿತಿ ಏನಾಗಿದೆ.? ಆರ್ಥಿಕ ಪರಿಸ್ಥಿತಿ ಏನಾಗಿದೆ? ಮಾಧ್ಯಮದಲ್ಲಿ ನಾವೇ ನೋಡ್ತಾ ಇದ್ದೇವೆ.ಹಾಗಾಗಿ ಇದು ಸುಮ್ಮನೆ ವೈಯಕ್ತಿಕವಾಗಿ ಮಾತಾಡುವಂತ ವಿಚಾರ ಅಲ್ಲ. ಸಾಕಷ್ಟು ರೈತರ ಸಮಸ್ಯೆ ಗಳನ್ನ ಎದುರಿಸುತ್ತಿದ್ದಾರೆ. ಹಿಂದುಳಿದ ಜನಾಂಗ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿರುವ ಮುಖ್ಯಮಂತ್ರಿಗಳು ಇವೆಲ್ಲದಕ್ಕೂ ಉತ್ತರ ಕೊಡಿ ಎಂದರು.
ಸಮಯ ಬಂದಾಗ ಎಲ್ಲವೂ ಬಿಡ್ತಿವಿ: ಕುಮಾರಣ್ಣನ ರಾಜಕಾರಣದ ಜೀವನದ ಉದ್ದಗಲಕ್ಕೂ ಹಿಟ್ ಅಂಡ್ ರನ್ ಮಾಡುವ ಪ್ರಶ್ನೆ ಇಲ್ಲ.ಅವರು ಮಾತನಾಡಬೇಕಾದ್ರೆ ಪೂರಕವಾದ ದಾಖಲೆಗಳನ್ನು ಕಲೆಕ್ಟ್ ಮಾಡಿ ರಾಜ್ಯದ ಜನತೆ ಮುಂದೆ ಇಟ್ಟಿರುವ ಉದಾಹರಣೆಗಳು ಸಾಕಷ್ಟು ಬಾರಿ ನೋಡಿದ್ದೇವೆ ಎಂದರು.
ನಮ್ಮ ಸಿದ್ದಂತವನ್ನ ಮಾರಾಟ ಮಾಡಿಲ್ಲ: ಸನ್ಮಾನ್ಯ ದೇವೇಗೌಡ ಸಾಹೇಬರು ಜಾತ್ಯತೀತ ಅನ್ನುವ ನಿಲುವಿನ ಮೇಲೆ ಪಕ್ಷವನ್ನ ಕಟ್ಟಿದ್ದಾರೆ. ದೇವೇಗೌಡ ರು ಮುಸ್ಲಿಂ ಸಮುದಾಯಕ್ಕೆ ರಿಸರ್ವೇಶನ್ ತಂದುಕೊಟ್ಟಂತವರು. ಇತಿಹಾಸ ಯಾರು ಮರೆಮಾಚಿಸಕ್ಕೆ ಆಗೋದಿಲ್ಲ.ನಾವು ಬಿಜೆಪಿ ಜೊತೆ ಕೈ ಜೋಡಿಸಿದ ಮಾತ್ರಕ್ಕೆ ನಮ್ಮ ಸಿದ್ದಂತವನ್ನ ಮಾರಾಟ ಮಾಡಿಕೊಂಡಿಲ್ಲ. ನಾನು ಅಲ್ಪಸಂಖ್ಯಾತರಿಗೂ ಕೂಡ ಎಲ್ಲಾ ಸಮುದಾಯದಗಳಿಗೂ ಕೂಡ ಸಮಾಜದ ಏಳಿಗೆಗೋಸ್ಕರ ಜನತಾದಳ ಪಕ್ಷ ದುಡಿಯುತ್ತೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
crime
crime
crime
crime
politics
crime
others
crime
others
others
crime
others
others
others
others
crime
education
crime
crime
others
crime
education
others
others
crime
economy
crime
sports
others
crime