ಸಾಲ ಮಾಡಿಕೊಂಡಿದ್ದ ಉದ್ಯಮಿ ಕೊಲೆ: ಪತ್ನಿ, ಅತ್ತೆ ಬಂಧನ
ಸಾಲ ಮಾಡಿಕೊಂಡಿದ್ದ ಉದ್ಯಮಿ ಕೊಲೆ: ಪತ್ನಿ, ಅತ್ತೆ ಬಂಧನ

ಬೆಳಗಾವಿ, (ಸೆ.05): ಮೈತುಂಬ ಸಾಲ ಮಾಡಿಕೊಂಡಿದ್ದ ಗಂಡನನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಿದ್ದ ಆರೋಪದಲ್ಲಿ ಪತ್ನಿ ಹಾಗೂ ಮೃತನ ಅತ್ತೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ತಾಲೂಕಿನ ಪಿರನವಾಡಿ ನಿವಾಸಿ ವಿನಾಯಕ ಜಾಧವ್ (48) ಎಂಬಾತನನ್ನು ಕಳೆದ ಜುಲೈ 29 ರಂದು ರಾತ್ರಿ ಪತ್ನಿ ರೇಣುಕಾ ಹಾಗೂ ಆಕೆಯ ತಾಯಿ ಶೋಭಾ ಭೀಕರವಾಗಿ ಹತ್ಯೆ ಮಾಡಿದ್ದಲ್ಲದೆ, ಕುಡಿದ ಅಮಲಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಿ ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿ ಹಾಕಲಾಗಿತ್ತು ಎನ್ನಲಾಗಿದೆ.

ಆದರೆ ಮೃತ ವ್ಯಕ್ತಿಯ ಸಹೋದರ ಅರುಣ್ ಎಂಬುವವರು ಕೊಲೆ ಶಂಕೆ ವ್ಯಕ್ತಪಡಿಸಿ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. 

ವಿನಾಯಕ ಜಾಧವ್ ಕೊಲೆ ಪ್ರಕರಣದ ತನಿಖೆ ನಡೆಸಿದ ನಡೆಸಿದ್ದ ಪೊಲೀಸರಿಗೆ ಇದು ಸಹಜ ಸಾವಲ್ಲ ವ್ಯವಸ್ಥಿತ ಕೊಲೆ ಎಂಬುದು ತಿಳಿದುಬಂದಿದೆ. ಉದ್ಯಮ ಭಾಗದಲ್ಲಿ ಸ್ವಂತ ಉದ್ಯೋಗ ಹೊಂದಿದ್ದ ಮೃತ ವ್ಯಕ್ತಿ ಸಾಲದ ಸುಳಿಗೆ ಸಿಲುಕಿದ್ದ. ಜತೆಗೆ ಸಾಲಕ್ಕೆ ಸ್ವಂತ ಮನೆಯನ್ನು ಅಡವಿಟ್ಟು ಮೂರು ವರ್ಷ ಮನೆ ಬಿಟ್ಟು ಹೋಗಿದ್ದನಂತೆ.

ಪತ್ನಿ ರೇಣುಕಾ ಜತೆ ಕುಡಿದು ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜುಲೈ 29 ರಂದು ರಾತ್ರಿ ಕುಡಿದು ಮನೆಗೆ ಬಂದ ಸಂದರ್ಭದಲ್ಲಿ ವಿನಾಯಕ ಜಾಧವ್ ಕುತ್ತಿಗೆಗೆ ಹಗ್ಗದಿಂದ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ರೇಣುಕಾ ಹಾಗೂ ಆಕೆಯ ತಾಯಿ ಶೋಭಾನನ್ನು ಪೊಲೀಸರು ಬಂಧಿಸಿದ್ದಾರೆ. 

ಮೈತುಂಬ ಸಾಲ ಮಾಡಿಕೊಂಡಿದ್ದ ಗಂಡನನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಿದ್ದ ಆರೋಪದಲ್ಲಿ ಪತ್ನಿ ಹಾಗೂ ಮೃತನ ಅತ್ತೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others