ಅಹಂಕಾರವಿದ್ದರೆ ನಿಜವಾದ ಸೇವಕನಾಗುವುದಿಲ್ಲ; ಮೋಹನ್ ಭಾಗವತ್
ಅಹಂಕಾರವಿದ್ದರೆ ನಿಜವಾದ ಸೇವಕನಾಗುವುದಿಲ್ಲ; ಮೋಹನ್ ಭಾಗವತ್

ನವದೆಹಲಿ, (ಜೂ.11); ಯಾರು ಜೀವನದಲ್ಲಿ ಅಹಂಕಾರ ಹೊಂದಿರುತಾರೋ ಅಂತಹ ವ್ಯಕ್ತಿ ನಿಜವಾದ ಸೇವಕ ಆಗಲು ಸಾಧ್ಯವಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್‌ ಸಂಘಟನೆಗಳ ತರಬೇತಿ ಶಿಬಿರದ ಅಂತಿಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಜವಾದ ಸೇವಕ ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ಅವನು ಕೆಲಸ ಮಾಡುವಾಗ ಸಭ್ಯತೆಯನ್ನು ಅನುಸರಿಸುತ್ತಾನೆ.

ಅಂತಹ ಕೆಲಸವನ್ನು ನಾನು ಈ ಕೆಲಸ ಮಾಡಿದ್ದೇನೆ. ಇದನ್ನು ನಾನು ಯಾವುದೇ ಅಹಂಕಾರದಿಂದ ಹೇಳುತ್ತಿಲ್ಲ, ಬದಲಿಗೆ ಅ ರೀತಿ ಕೆಲಸ ಮಾಡಿದರೆ ಮಾತ್ರ ಆ ವ್ಯಕ್ತಿಯನ್ನು ನಿಜವಾದ ಸೇವಕನಾಗುತ್ತಾನೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾದ ಬಳಿಕ ಭಾಗವತ್ ಅವರ ಹೇಳಿಕೆ ಬಂದಿದ್ದು, ಪಕ್ಷವು 272 ರ ಬಹುಮತ ಪಡೆಯಲೂ ಸಾದ್ಯವಾಗಲಿಲ್ಲ ಎಂದು ಹೇಳಿದರು. 

ಬಿಜೆಪಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳನ್ನು ಅವಲಂಬಿಸಿದೆ. ಜೊತೆಗೆ ಆರ್‌ಎಸ್‌ಎಸ್ ನನ್ನೂ ಎಳೆದು ತರಲಾಗಿದೆ ಎಂದು ಮೋಹನ್ ಭಾಗವತ್ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಎಲ್ಲೆಡೆ ಸಾಮಾಜಿಕ ಒಗ್ಗಟ್ಟು ಇಲ್ಲ, ಅದು ಸರಿಯಲ್ಲ. "ಮಣಿಪುರ ಒಂದು ವರ್ಷದಿಂದ ಶಾಂತಿಗಾಗಿ ಕಾಯುತ್ತಿದೆ. ಇದಕ್ಕೂ ಮುನ್ನ 10 ವರ್ಷಗಳ ಕಾಲ ಸ್ತಬ್ಧವಾಗಿತ್ತು. ಹಳೇ ಬಂದೂಕು ಸಂಸ್ಕೃತಿ ಮುಗಿಯಿತು ಅನ್ನಿಸಿತು. ಮತ್ತು ಇದ್ದಕ್ಕಿದ್ದಂತೆ ಅಲ್ಲಿ ಸೃಷ್ಟಿಯಾದ ಅಪಶ್ರುತಿಯ ಬೆಂಕಿ ಇನ್ನೂ ಉರಿಯುತ್ತಿದೆ ಮತ್ತು ಕೆರಳುತ್ತಿದೆ. ಇದರತ್ತ ಗಮನ ಹರಿಸುವವರು ಯಾರು?  ಅದನ್ನು ಆದ್ಯತೆಯ ಮೇಲೆ ಪರಿಗಣಿಸುವುದು ನಮ್ಮ ಕರ್ತವ್ಯ". ದೇಶ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸುವುದು ಅಗತ್ಯ.

ನಿಜವಾದ ಸೇವಕನು ಅಹಂಕಾರವಿಲ್ಲದೆ ವರ್ತಿಸಬೇಕು. ಚುನಾವಣೆ ಸಂದರ್ಭದಲ್ಲಿ ಉಭಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಲು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ತಂತ್ರಜ್ಞಾನವನ್ನು ಬಳಸಿಕೊಂಡು ಇಂತಹ ಸುಳ್ಳುಗಳನ್ನು ಹರಡಲಾಗುತ್ತದೆ. ಈ ರೀತಿಯ ತಂತ್ರ ಉಪಯೋಗಿಸಲು? ಅಂತಹ ಹಾದಿಯಲ್ಲಿ ದೇಶ ಸಾಗಿದರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳನ್ನು ಶತ್ರುಗಳು ಎಂದು ಕರೆಯಲು ನಾನು ಬಯಸುವುದಿಲ್ಲ. ವಿರೋಧ ಪಕ್ಷಗಳು ಎಂದಿಗೂ ಶತ್ರುಗಳಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಒಗ್ಗಟ್ಟಾಗಿ ಪ್ರಯಾಣಿಸಿ ಒಮ್ಮತ ಮೂಡಿಸಬೇಕು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಕಡೆ ಯೋಜನೆ ರೂಪಿಸಿದರೆ, ಇನ್ನೊಂದು ಕಡೆ ತನ್ನ ದೃಷ್ಟಿಕೋನವನ್ನು ವ್ಯಕ್ತಪಡಿಸಬೇಕು ಎಂದು ಮೋಹನ್ ಭಾಗವತ್ ಸಲಹೆ ನೀಡಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature

HL

politics