ಕಂದಕಕ್ಕೆ ಉರುಳಿದ ಪ್ರವಾಸಿಗರಿದ್ದ ಬಸ್..!; ಇಬ್ಬರು ಮಕ್ಕಳ ಸಾವು.. ವೈರಲ್ ವಿಡಿಯೋ ನೋಡಿ
ಕಂದಕಕ್ಕೆ ಉರುಳಿದ ಪ್ರವಾಸಿಗರಿದ್ದ ಬಸ್..!; ಇಬ್ಬರು ಮಕ್ಕಳ ಸಾವು.. ವೈರಲ್ ವಿಡಿಯೋ ನೋಡಿ

ಸಪುತಾರಾ, (ಜುಲೈ.10): ಗುಜರಾತ್‌ ರಾಜ್ಯದ ದಂಗ್ ಜಿಲ್ಲೆಯ ಸಪುತಾರಾ ಘಾಟ್‌ನಲ್ಲಿ ಪ್ರವಾಸಿಗರ ಬಸ್ ಕಂದಕಕ್ಕೆ ಉರುಳಿ ಇಬ್ಬರು ಮಕ್ಕಳು ಮೃತಪಟ್ಟು, ಐದು ಮಂದಿಗೆ ಗಂಭೀರ ಗಾಯಗಳಾಗಿರುವುದು ವರದಿಯಾಗಿದೆ.

ಘಟನೆಯಲ್ಲಿ ಎಂಟು ವರ್ಷದ ಬಾಲಕ ಮತ್ತು 10 ವರ್ಷದ ಬಾಲಕಿ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ, ಸ್ಥಳಿಯರು ಹಾಗೂ ಸಪುತಾರಾ ಪೊಲೀಸರು ಗಾಯಾಳುಗಳನ್ನು ಗುಜರಾತ್‌ನ ಶಾಮ್‌ಗವಾನ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

ಈ ದುರ್ಘಟನೆಯ ಸಂಪೂರ್ಣ ವೀಡಿಯೋ ಸೆರೆಯಾಗಿದೆ. ಬಸ್‌ನ ಪ್ರಯಾಣಿಕರೊಬ್ಬರು ಘಾಟ್ ಪ್ರದೇಶದಲ್ಲಿನ ಸುಂದರ ಪರಿಸರವನ್ನು ಚಿತ್ರೀಕರಣ ಮಾಡುತ್ತಿರುತ್ತಾರೆ.

ಒಂದೆರಡು  ನಿಮಿಷ ಮುಂದಕ್ಕೆ ಬಸ್ ಚಲಿಸುತ್ತಿದ್ದಂತೆ ದೊಡ್ಡ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪ್ರಪಾತಕ್ಕೆ ಉರುಳುತ್ತದೆ. ಉರುಳಿದ ಬಳಿಕವೂ ವೀಡಿಯೋ ಕ್ಯಾಮರಾ ಆಫ್ ಆಗದೇ , ಬಸ್ ಬಿದ್ದ ಬಳಿಕ ಪ್ರಯಾಣಿಕ ಚೀರಾಟ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆ ಭಾನುವಾರ ಸಂಜೆ ನಡೆದಿದ್ದು ಸಾಮಾಜಿಕ ಜಾಲತಾಣದ ಮೂಲಕ ತಡವಾಗಿ ಬೆಳಕಿಗೆ ಬಂದಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others