ಪಟಾಕಿ ಘಟಕ ಸ್ಫೋಟಕ್ಕೆ ಇಬ್ಬರು ಬಲಿ..!
ಪಟಾಕಿ ಘಟಕ ಸ್ಫೋಟಕ್ಕೆ ಇಬ್ಬರು ಬಲಿ..!

ವಿರುಧುನಗರ್, (ಜುಲೈ.10): ತಮಿಳುನಾಡಿನ ಪ್ರಸಿದ್ಧ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಭಾರಿ ಸ್ಪೋಟ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಕಾರ್ಮಿಕರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಪ್ರೀಂ ಫೈರ್‌ವರ್ಕ್ಸ್ ಹೆಸರಿನ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ 9.30ರಲ್ಲಿ ಸ್ಫೋಟವಾಗಿದೆ. ಮಿಕ್ಸಿಂಗ್ ಬಳಿಕ ಗನ್‌ ಪೌಡರ್ ತೆಗೆಯುವಾಗ ರಾಸಾಯನಿಕಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸದೇ ಇದ್ದುದರಿಂದಲೇ ಸ್ಪೋಟವಾಗಿದೆ ಎನ್ನಲಾಗಿದೆ.

ಮಿಕ್ಸಿಂಗ್ ಘಟಕದ ಮಗ್ಗಲಲ್ಲೇ ಇದ್ದ ಕಾರ್ಮಿಕರಾದ ಮರಿಯಪ್ಪನ್ (45 ವರ್ಷ), ಮುಥು ಮುರುಗನ್ (45 ವರ್ಷ) ಜೀವ ಕಳೆದುಕೊಂಡಿದ್ದಾರೆ.

ಕೆಮಿಕಲ್ ಮಿಕ್ಸಿಂಗ್ ಕೊಠಡಿ ಬಳಿ ನಿಂತಿದ್ದ ಕಾರ್ಮಿಕರಾದ ಸರೋಜಾ(58 ವರ್ಷ) ಮತ್ತು ಸಂಕರವೇಲ್ (58 ವರ್ಷ) ಅವರಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನು ವಿರುಧುನಗ‌ರ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ. 28 ಎಕರೆ ವಿಸ್ತಾರದ ಪಟಾಕಿ ಕಾರ್ಖಾನೆ ನಾಗಪುರ ಲೈಸನ್ಸ್ ಹೊಂದಿದ್ದು, 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ಸ್ಫೋಟ ಸಂಬಂಧ ಕಾರ್ಖಾನೆ ವ್ಯವಸ್ಥಾಪಕ ಮತ್ತು ಉಸ್ತುವಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others