ಹರಿತಲೇಖನಿ ದಿನಕ್ಕೊಂದು ಕಥೆ; ದ್ರೌಪದಿಯ ಮೇಲೆ ಕಣ್ಣಿಟ್ಟ ಕೀಚಕನ ಸ್ಥಿತಿ ಏನಾಯ್ತು
ಹರಿತಲೇಖನಿ ದಿನಕ್ಕೊಂದು ಕಥೆ; ದ್ರೌಪದಿಯ ಮೇಲೆ ಕಣ್ಣಿಟ್ಟ ಕೀಚಕನ ಸ್ಥಿತಿ ಏನಾಯ್ತು

ಮಹಾಭಾರತದ ಕಥೆಯನ್ನು ಕೇಳಿದ್ದರೆ ನಿಮಗೆ ಕೀಚಕ ಹಾಗೂ ಭೀಮನ ಕಥೆ ಗೊತ್ತೇ ಇರಬಹುದು. ಕೀಚಕ ಯಾವ ರೀತಿ ಭೀಮನ ಕೈಯಿಂದ ಸಂಹರಿಸಲ್ಪಟ್ಟ ಎನ್ನುವ ಕಥೆ ಗೊತ್ತಿರಬಹುದು. ಆದರೆ ಆ ಸ್ಥಳ ಯಾವುದು ಎನ್ನುವುದು ಗೊತ್ತಿರಲಿಕ್ಕಿಲ್ಲ. ನಿಮಗೆ ಗೊತ್ತಿಲ್ಲ ಎಂದರೆ ಇಲ್ಲಿದೆ ನೋಡಿ ಭೀಮ ಕೀಚಕನನ್ನು ಹೇಗೆ ಸಂಹರಿಸಿದ, ಯಾಕಾಗಿ ಸಂಹರಿಸಿದ ಎಂದು.

ವಿರಾಟನ ರಾಜ್ಯ; ವಿರಾಟನ ಸೇನಾಧಿಪತಿಯಾಗಿದ್ದ ಕೀಚಕನನ್ನು ಕಂಡು ಹೆದರಿದಕೌರವರು ವಿರಾಟನ ರಾಜ್ಯದಕಡೆಗೆತಲೆ ಮಾಡಿ ಮಲಗುವುದಿಲ್ಲವೆಂಬಅಂಶವನ್ನು ತಿಳಿದಪಾಂಡವರು ವಿರಾಟ ರಾಜಧಾನಿಯಲ್ಲಿ ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ನಿರ್ಧರಿಸಿದರು.

ದ್ರೌಪದಿ ಸೈರಂಧ್ರಿಯಾಗಿ ಮಾಲಿನಿ ಎಂಬ ಹೆಸರಿನಲ್ಲಿ ರಾಣಿಸುದೇಷ್ಣೆಯ ಬಳಿ ಸೇವಕಿಯಾದಳು. ದ್ರೌಪದಿ ಮರೆವೇಷದಲ್ಲಿದ್ದರೂ ತನ್ನ ಸೌಂದರ್ಯವನ್ನು ಮುಚ್ಚಿಟ್ಟುಕೊಳ್ಳಲು ಅಸಮರ್ಥಳಾಗಿದ್ದಳು. ಅಕ್ಕನ ಅಂತಃಪುರದಲ್ಲಿ ಓಡಾಡುತ್ತಿದ್ದ ಇವಳನ್ನು ಕೀಚಕಕಂಡು ಅವಳ ಪ್ರೇಮವನ್ನು ಯಾಚಿಸುತ್ತಾನೆ.

ದ್ರೌಪದಿಯಿಂದ ತಿರಸ್ಕೃತನಾದ ಕೀಚಕ ತನ್ನ ಅಕ್ಕನ ನೆರವನ್ನು ಬೇಡುತ್ತಾನೆ. ಮಾಲಿನಿಯನ್ನು ತರುವಂತೆ ಒತ್ತಾಯ ಮಾಡಿ ಸುದೇಷ್ಣೆ ದ್ರೌಪದಿಯನ್ನು ಕೀಚಕನ ಅರಮನೆಗೆ ಕಳುಹಿಸುತ್ತಾಳೆ. ಅವಳನ್ನು ಕಂಡ ಕೀಚಕ ಕಾಮೋದ್ರೇಕದಿಂದ ಮುಂದುವರಿಯುತ್ತಾನೆ.

ದ್ರೌಪದಿ ಅವನಿಂದ ತಪ್ಪಿಸಿಕೊಂಡು ಬಂದು ರಾಜಸಭೆಯನ್ನು ಪ್ರವೇಶಿಸುತ್ತಾಳೆ. ಕೀಚಕ ಬೆನ್ನಟ್ಟಿ ಬಂದು ತುಂಬಿದ ಸಭೆಯಲ್ಲಿ ಅವಳ ಜುಟ್ಟು ಹಿಡಿದು ವಿರಾಟರಾಜ, ವೇಷಾಂತರದಲ್ಲಿದ್ದ ಧರ್ಮರಾಯ ಮತ್ತು ಭೀಮಾದಿಗಳೆದುರಿಗೆ ಒದ್ದು ಕೆಡವುತ್ತಾನೆ.


ಅಪಮಾನ ಜರ್ಝರಿತಳಾದ ದ್ರೌಪದಿ ಭೀಮನ ನೆರವನ್ನು ಬೇಡುತ್ತಾಳೆ. ಭೀಮ ಭರವಸೆ ಕೊಟ್ಟಮೇಲೆ ದ್ರೌಪದಿ ಕೀಚಕನನ್ನು ರಾತ್ರಿ ನಾಟ್ಯ ಶಾಲೆಗೆ ಏಕಾಂಗಿಯಾಗಿ ಬರಲು ಆಹ್ವಾನ ಕೊಡುತ್ತಾಳೆ.

ಇಚ್ಛಾ ಪೂರ್ಣತೆಯ ಭರವಸೆಯಿಂದ ಹಿಗ್ಗಿ ಕೀಚಕ ರಾತ್ರಿ ನಾಟ್ಯ ಶಾಲೆಗೆ ಗೋಪ್ಯವಾಗಿ ಬರುತ್ತಾನೆ. ಮಾರು ವೇಷದಲ್ಲಿದ್ದ ಭೀಮನಿಗೂ ಕೀಚಕನಿಗೂ ಮಲ್ಲಯುದ್ಧ ನಡೆದು ಕೀಚಕ ಸಾಯುತ್ತಾನೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....