ಕರ್ನಾಟಕದ ಗ್ಯಾರಂಟಿಗಳನ್ನು ಟೀಕಿಸಿದ ಕೆಸಿಆರ್‌ ದತ್ತು ಪುತ್ರನಿಗೆ ಶಾಸಕ ಪ್ರದೀಪ್‌ ಈಶ್ವರ್ ಓಪನ್ ಚಾಲೆಂಜ್.!!
ಕರ್ನಾಟಕದ ಗ್ಯಾರಂಟಿಗಳನ್ನು ಟೀಕಿಸಿದ ಕೆಸಿಆರ್‌ ದತ್ತು ಪುತ್ರನಿಗೆ ಶಾಸಕ ಪ್ರದೀಪ್‌ ಈಶ್ವರ್ ಓಪನ್ ಚಾಲೆಂಜ್.!!

ಬಾಲಕೊಂಡ, (ನ.20): ಕಾಂಗ್ರೆಸ್ ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಟೀಕಿಸಿದ ಕೆಸಿಆರ್‌ ದತ್ತು ಪುತ್ರನಿಗೆ ಶಾಸಕ ಪ್ರದೀಪ್‌ ಈಶ್ವರ್ ಬಹಿರಂಗ ಸವಾಲ್‌ ಹಾಕಿದ್ದಾರೆ.

ಪ್ರಸ್ತುತ ತೆಲಾಂಗಾಣ ರಾಜ್ಯದಲ್ಲಿ ವಿಧಾನ ಸಭಾ ಚುನಾವಣಾ ಬಹಿರಂಗ ಪ್ರಚಾರ ನಡೆಯುತ್ತಿದ್ದು, ತೆಲಾಂಗಾಣದ ಬಾಲಕೊಂಡ ವಿಧಾನ ಸಭಾ ಕ್ಷೇತ್ರದ ವೀಕ್ಷಕರ ಹಾಗೂ ಚುನಾವಣಾ ಉಸ್ತುವಾರಿ ಹೊತ್ತಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್ ಕಾಂಗ್ರೆಸ್‌ ಅಭ್ಯರ್ಥಿ ಮುತ್ಯಾಲ ಸುನಿಲ್ ಕುಮಾರ್‌ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಚುನಾವಣಾ ಪ್ರಚಾರದ ಸಮಯದಲ್ಲಿ ಸೋಮವಾರ ಬಾಲಕೊಂಡ ವಿಧಾನ ಸಭಾ ಕ್ಷೇತ್ರದ ಬಿಆರ್‌ಎಸ್‌ ಪಕ್ಷದ ಅಭ್ಯರ್ಥಿ ಹಾಗೂ ತೆಲಾಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್ ರ ದತ್ತುಪುತ್ರ, ತೆಲಂಗಾಣದ ಸಚಿವ ಪ್ರಶಾಂತ್ ರೆಡ್ಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸಿ, ಗ್ಯಾರಂಟಿಗಳು ಎಲ್ಲಾ ಸುಳ್ಳು. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವ ಆಶ್ವಾಸನೆ ನೀಡಿದಂತೆ ಯಾವ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದಿಲ್ಲಾ ಎಲ್ಲಾ ಸುಳ್ಳು ಭರವಸೆಗಳು ಎಂದು ಜರಿದಿದ್ದರು.

ಈ ವಿಷಯವಾಗಿ ತೆಲಾಂಗಾಣದ ಬಾಲಕೊಂಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್, ಕೆಸಿಆರ್‌ ದತ್ತು ಪುತ್ರ ಪ್ರಶಾಂತ್ ರೆಡ್ಡಿಗೆ ನಿಮಗೆ ದಮ್ಮ,ತಾಕತ್ತು ಇದ್ದರೆ ಕರ್ನಾಟಕಕ್ಕೆ ಎಲ್ಲಾ ಮಾದ್ಯಮಗಳನ್ನು ಕರೆದು ಕೊಂಡು ಬನ್ನಿ, ಲೈವ್‌ ಮಾಡಿ, ನಮ್ಮ ಕಾಂಗ್ರೆಸ್ ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಚುನಾವಣಾ ಪೂರ್ವ ನೀಡಿರುವ ಭರವಸೆಗಳನ್ನು ಹೇಗೆ ಅನುಷ್ಟಾನಕ್ಕೆ ತಂದಿದೆ. ಮತ್ತು ಇದರಿಂದ ರಾಜ್ಯದ ಜನತೆಗೆ ಅನುಕೂಲವಾಗಿದೆ ಎಂದು ಜನತೆಯನ್ನೇ ಕೇಳಿ ಎಂದರಲ್ಲದೇ, 22 ರಂದು ಸಂಜೆಗೆ ಚುನಾವಣಾ ಪ್ರಚಾರ ಮುಗಿಯುತ್ತದೆ.

ನಿಮಗೆ ವಿಮಾನದ ಟಿಕೆಟನ್ನು ನಾನೇ ಬುಕ್‌ ಮಾಡುವೆ. ನನ್ನೊಂದಿಗೆ ಬರಲು ನಿಮಗೆ ತಾಕತ್ತು ದಮ್ಮು ಇದೆಯಾ? ಬರುತ್ತೀರಾ? ಎಂದು ಸವಾಲು ಹಾಕಿದ್ದಾರೆ.

ನವೆಂಬರ್ 22 ಬೆಳಗ್ಗೆ 11 ಗಂಟೆಗೆ ಪ್ರಶಾಂತ್ ರೆಡ್ಡಿ ಮನೆ ಮುಂದೆ ಹೋಗಿ ಪ್ರಶಾಂತ್ ರೆಡ್ಡಿ ರವರನ್ನು ಕರ್ನಾಟಕಕ್ಕೆ ಬಂದು ಯಶಸ್ವಿ ಯಾಗಿರುವ ಕರ್ನಾಟಕ ಗ್ಯಾರಂಟಿಗಳನ್ನು ವೀಕ್ಷಸಲು ಬಹಿರಂಗ ಆಹ್ವಾನ ನೀಡಿ ಸವಾಲು ಹಾಕಲಿರುವುದಾಗಿ ಪ್ರದೀಪ್ ಈಶ್ವರ್ ತಿಳಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->