ಭಾರತಕ್ಕೆ ಆಘಾತಕಾರಿ ಸೋಲು: ಹೃದಯಾಘಾತದಿಂದ ಯುವಕ ಸಾವು..!
ಭಾರತಕ್ಕೆ ಆಘಾತಕಾರಿ ಸೋಲು: ಹೃದಯಾಘಾತದಿಂದ ಯುವಕ ಸಾವು..!

ತಿರುಪತಿ, (ನ.20); ಅಹಮದಾಬಾದ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಸೋಲನ್ನಪ್ಪಿದ ಕಾರಣ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಿರುಪತಿ ಸಮೀಪದ ದುರ್ಗಾಸಮುದ್ರಮ್ ಗ್ರಾಮದಲ್ಲಿ ನಡೆದಿದೆ.

ದುರ್ಗಾಸಮುದ್ರಮ್ ಗ್ರಾಮದ ಜ್ಯೋತಿ ಕುಮಾರ್‌ ಯಾದವ್ ಮೃತ ಯುವಕನಾಗಿದ್ದು ಭಾರತ ತಂಡದ ಸೋಲಿಗೆ ಈತ ತೀವ್ರವಾಗಿ ಮನನೊಂದಿದ್ದ ಎನ್ನಲಾಗಿದೆ.

ಬಿ-ಟೆಕ್ ಓದುತ್ತಿದ್ದ ಜ್ಯೋತಿಕುಮಾರ್ ಯಾದವ್ ತನ್ನ ಊರಿನಲ್ಲೇ ಕಂಪ್ಯೂಟರ್ ಸೆಂಟರ್ ಕೂಡ ನಡೆಸುತ್ತಿದ್ದ ಭಾನುವಾರ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ನೋಡುತ್ತಿದ್ದಾಗ ಭಾರತ ತಂಡದ ಸೋಲಿನಿಂದ ತೀವ್ರವಾಗಿ ಆಘಾತಕ್ಕೊಳಗಾಗಿದ್ದ ಎನ್ನಲಾಗಿದೆ.

ಆಸ್ಟ್ರೇಲಿಯದ ಗೆಲುವು ಮತ್ತು ಭಾರತದ ಸೋಲಿನ ನಂತರ ಆಟಗಾರರು ಕಣ್ಣೀರು ಸುರಿಸುವುದನ್ನು ಅವರು ಸಹಿಸಲಿಲ್ಲ. ಈ ಸಂದರ್ಭದಲ್ಲಿ ಜ್ಯೋತಿ ಕುಮಾರ್ ಯಾದವ್ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಆತನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. 

ಮಗನ ಹಠಾತ್ ಸಾವಿನಿಂದ ಪಾಲಕರು ಕಂಬನಿ ಮಿಡಿದಿದ್ದಾರೆ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....