ದೊಡ್ಡಬಳ್ಳಾಪುರ, (ಜೂ.08): ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 8 ರಂದು ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಸಹಯೋಗದಲ್ಲಿ ಬಾಶೆಟ್ಟಿಹಳ್ಳಿ ಕೆರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ನರಸಿಂಹಮೂರ್ತಿ ಮತ್ತು ಮಾಜಿ ಅಧ್ಯಕ್ಷ ಕೃಷ್ಣಪ್ಪ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಸ್ವಯಂ ಸೇವಕರು ಕೆರೆ ಆವರಣದಲ್ಲಿ ಕಸ ಸಂಗ್ರಹಿಸಿ ಪಂಚಾಯತಿಗೆ ಒಪ್ಪಿಸಿದರು. ಇದೇ ವೇಳೆ ಕೆರೆ ನೀರಿನ ಗುಣಮಟ್ಟದ ಪರೀಕ್ಷೆ ಮಾಡಲಾಯಿತು.
ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಂಚಾಯತಿವತಿಯಿಂದ ಕೆರೆಯನ್ನು ಸುಂದರಿಕರಣ ಮಾಡಲಾಗುವುದು ಎಂದು ತಿಳಿಸಿದರು.
ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾದ ಲೋಹಿತ್ ವೈ ಟಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯ ಜಾಲಮೂಲಗಳಿಗೆ ಸೇರಿದರೆ ಜಲಚರಗಳಿಗೆ ಅಪಾಯ, ನಮ್ಮ ಕಣ್ಣಿಗೆ ಕಾಣದ ಮೈಕ್ರೂ ಪ್ಲಾಸ್ಟಿಕ್ ಇಂದು ಕೆರೆ ನದಿಗಳನ್ನು ಸೇರುತ್ತಿದೆ ಹಾಗಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾದ ರಾಹುಲ್, ಪ್ರಗ್ಯ, ಪಟ್ಟಣ ಪಂಚಾಯತಿ ಅಧಿಕಾರಿಗಳಾದ ರಮೇಶ್ ಬಾಬು, ಕೀರ್ತಿ, ಸ್ತ್ರೀ ಶಕ್ತಿ ಸಂಘದ ಮಮತಾ ಮತ್ತು ಸಂಗಡಿಗರು, ನವೋದಯ ಚಾರಿಟಬಲ್ ಟ್ರಸ್ಟಿನ ಜನಾರ್ಧನ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ವೆಂಕಟರಾಜು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
-->Latest News
others
others
others
others
crime