ದೊಡ್ಡಬಳ್ಳಾಪುರ, (ಜೂ.08): ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ಗುರುವಾರ ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನೆ, ಪೊಲೀಸ್ ಅಧಿಕಾರಿಗಳ ಭರವಸೆಗೆ ಹಿನ್ನೆಲೆಯಲ್ಲಿ ಅಂತ್ಯಗೊಂಡಿದೆ.
ದೊಡ್ಡಬಳ್ಳಾಪುರದಿಂದ ಕಾವೇರಿಭವನ, ಮೆಜೆಸ್ಟಿಕ್ ಕಡೆಗೆ ಸಾಗಬೇಕಾದ ಬಸ್ಸುಗಳು ನಿಗದಿತ ಸಮಯಕ್ಕೆ ಬಾರದ ಕಾರಣ ಪ್ರತಿನಿತ್ಯ, ವಿದ್ಯಾರ್ಥಿಗಳು, ಉದ್ಯೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸದೆ. ಬೇಕಾಬಿಟ್ಟಿ ಲೆಕ್ಕತೋರಿಸಿ ನುಣಿಚಿಕೊಳ್ಳುತ್ತಿದ್ದಾರೆಂಬ ಅರೋಪ ವ್ಯಕ್ತವಾಗಿತ್ತು.
ಗುರುವಾರ ಬೆಳಗ್ಗೆ ಪ್ರತಿ ದಿನದಂತೆ ಬೆಂಗಳೂರು ಮಾರ್ಗಕ್ಕೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ್ದರು. ಬೆಳಗ್ಗೆ 8 ಗಂಟೆಯಿಂದ 8.50ರ ವರೆಗೆ ಬರಬೇಕಾದ ಬಸ್ಸುಗಳು ಬಂದಿಲ್ಲ. ಈ ಕುರಿತಂತೆ ಟಿಸಿ ಅವರಿಗೆ ವಿದ್ಯಾರ್ಥಿಗಳು ಮನವಿ ಮಾಡಿದರು ಸ್ಪಂದಿಸಿಲ್ಲ. ಈ ವಿಷಯ ತಿಳಿದ ಉದ್ಯೋಗಿಗಳು, ವಿದ್ಯಾರ್ಥಿಗಳು, ಪ್ರಯಾಣಿಕರು ಒಟ್ಟಾಗಿ ತೆರಳಿ ಟಿಸಿ ಬಳಿ ಜೋರು ದನಿಯಲ್ಲಿ ಕೇಳಿದಾಗ ಡಿಪೋಗೆ ಕರೆ ಮಾಡಿ ಬಸ್ ತರಿಸಿದ್ದರು.
ಅಲ್ಲದೆ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಮಾಡ್ತಿರಾ ಎಂದು ಅವಾಜ್ ಹಾಕಿದ್ದು, ಪೊಲೀಸ್ ಕರೆಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಇದರಿಂದ ಕೆರಳಿದ ವಿದ್ಯಾರ್ಥಿಗಳು, ನೌಕರರು, ಪ್ರಯಾಣಿಕರು ಸಮರ್ಪಕವಾಗಿ ಬಸ್ ವ್ಯವಸ್ಥೆ ಮಾಡದೇ, ಪ್ರಶ್ನೆ ಮಾಡುವವರ ವಿರುದ್ಧವೇ ಆರೋಪ ಮಾಡುತ್ತಿರುವ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸಮರ್ಪಕವಾಗಿ ಬಸ್ ವ್ಯವಸ್ಥೆ ಭರವಸೆ ನೀಡದ ಹೊರತು ಬಸ್ ತೆರಳಕು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರೀತಂ ಶ್ರೇಯಕರ ಅವರು ಪ್ರಯಾಣಿಕರ ಮನವೊಲಿಸಲು ಪ್ರಯತ್ನಿಸಿದರಾದರೂ. ಸಾರಿಗೆ ಅವ್ಯವಸ್ಥೆ ಕುರಿತಂತೆ ವಿದ್ಯಾರ್ಥಿಗಳು, ಉದ್ಯೋಗಿಗಳು, ಪ್ರಯಾಣಿಕರ ಪ್ರಶ್ನೆಗೆ ಉತ್ತರಿಸದಾದರು.
ಅಂತಿಮವಾಗಿ ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ಸಂತೋಷ್ ಅವರನ್ನು ಕರೆಸಿದ ಅವರು ಮಾತಕತೆ ನಡೆಸಿ, ಬಸ್ ಅವ್ಯವಸ್ಥೆ ಸರಿಪಡಿಸಲು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
Latest News
others
others
others
others
others