ದೊಡ್ಡಬಳ್ಳಾಪುರ, (ಫೆ.06): ಜೆಡಿಸ್ ಪಕ್ಷದ ವರಿಷ್ಠರಾದ ದೇವೇಗೌಡರ ಮಾತಿನಂತೆ ದೊಡ್ಡಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬದಲಾವಣೆಯ ನಿರೀಕ್ಷೆಯಿದೆ ಎಂದು ಹುಸ್ಕೂರ್ ಆನಂದಣ್ಣ ಯುವ ಬ್ರಿಗೇಡ್ ಅಧ್ಯಕ್ಷ ರಾಕೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಬೇಕಾದ ಹುಸ್ಕೂರ್ ಆನಂದ್ ಅವರನ್ನು, ಚುನಾವಣೆ ಸಮಿತಿ ಸಂಚಾಲಕರನ್ನಾಗಿಸಿರುವುದು ಬೇಸರದ ವಿಷಯವಾಗಿದ್ದು, ಈ ಕುರಿತಂತೆ ಕೆಲ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟ ನಿರ್ಧಾರವನ್ನು ಆನಂದ್ ಅವರು ತಿಳಿಸಿದ್ದಾರೆ.
ಹುಸ್ಕೂರ್ ಅನಂದ್ ಅವರ ಚಿಂತನೆಗಳು ಯುವ ಬ್ರಿಗೇಡ್ ಸ್ಥಾಪನೆಗೆ ಮಾದರಿಯಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಯೋ ಗ್ಯಾಸ್ ಸ್ಥಾಪನೆ. ಶಿಕ್ಷಣ ಕ್ಷೇತ್ರಕ್ಕೆ ನೆರವು ಮುಂತಾದ ಕಾರ್ಯಕ್ರಮಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ನಿರುದ್ಯೋಗ, ಭ್ರಷ್ಟಾಚಾರ, ಮೂಲಭೂತ ಸಮಸ್ಯೆ ಅರಿಯುವುದು, ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಚೇತನ್, ಅರುಣ್, ಗಗನ್, ರಮೇಶ್, ರಮೇಶ್, ಹರ್ಷ, ಕುಮಾರ್, ನಿಖಿಲ್, ಸುದರ್ಶನ್, ನಿತಿನ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
Latest News
others
others
others
politics
politics