ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರಕ್ಕೆ ಬಂದ ಟ್ರ್ಯಾಕ್ಟರ್'ಗಳ ಸಾಲು....!! / ಕೇಳುವವರಿಲ್ಲ ಅನ್ನದಾತನ ಗೋಳು
ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರಕ್ಕೆ ಬಂದ ಟ್ರ್ಯಾಕ್ಟರ್'ಗಳ ಸಾಲು....!! / ಕೇಳುವವರಿಲ್ಲ ಅನ್ನದಾತನ ಗೋಳು

ದೊಡ್ಡಬಳ್ಳಾಪುರ, (ಫೆ.06): ರಾಗಿ ಬೆಳೆಯುವ ರೈತರಿಗೆ ರಾಗಿ ಬೆಳೆ ಬೆಳೆಯುವುದಕ್ಕಿಂತಲು ಕಷ್ಟ ರಾತ್ರಿ ಹಗಲೆನ್ನದೆ ಚಳಿಯಲ್ಲಿ ನಡುಗತ್ತ ವನವಾಸ ಪಡುವ ಪಾಡು ರಾಗಿಯನ್ನು ಖರೀದಿ ಕೇಂದ್ರಕ್ಕೆ ತಲುಪಿಸುವದೇ ಆಗಿದೆ.

ರೈತರಿಂದ ಸೋಮವಾರ ಬೆಳಿಗ್ಗೆ ರಾಗಿ ಪಡೆಯಲು ಭಾನುವಾರದಿಂದಲೇ ಟ್ರ್ಯಾಕ್ಟರ್ಗಲ್ಲಿ ರಾಗಿ ಚೀಲಗಳನ್ನು ತುಂಬಿಕೊಂಡು ಹೋಗಿ ಸಾಲುಗಟ್ಟಿ ನಿಲ್ಲುವಂತಾಗಿದೆ.

ತಾಲ್ಲೂಕಿನ ಗೌರಿಬಿದನೂರು ರಸ್ತೆಯ ಗುಂಡಮಗೆರೆ ಕ್ರಾಸ್ ಸಮೀಪ ಇರುವ ಆಹಾರ ನಿಗಮನದ ಗೋದಾಮುಗಳಲ್ಲಿ ರಾಗಿಯನ್ನು ದಾಸ್ತಾನು ಮಾಡಲಾಗುತ್ತಿದೆ.

ನಗರದಿಂದ ಸುಮಾರು 9 ಕಿ.ಮೀ ದೂರದ ಇಲ್ಲಿಗೆ ರೈತರು ಟ್ರ್ಯಾಕ್ಟರ್'ಗಳಲ್ಲಿ ಒಂದು ದಿನ ಮುಂಚಿತವಾಗಿಯೇ ರಾಗಿ ಚೀಲಗಳನ್ನು ತಂದು ಸಾಲುಗಟ್ಟಿ ಕಾದು ನಿಲ್ಲಿಬೇಕಿದೆ. ರಾಗಿ ಖರೀದಿ ಕೇಂದ್ರದಲ್ಲಿ ಕಾರ್ಮಿಕರ ಸಂಖ್ಯೆ ತೀರ ಕಡಿಮೆ ಇದೆ. ಹೀಗಾಗಿ ಟ್ರ್ಯಾಕ್ಟರ್ಗಳಿಂದ ರಾಗಿ ತುಂಬಿದ ಚೀಲಗಳನ್ನು ಗೋದಾಮಿನಲ್ಲಿ ಇಳಿಸಿಕೊಳ್ಳುವುದು ತಡವಾಗುತ್ತಿದೆ ಎಂದು ರಾಗಿ ಬೆಳೆಗಾರ ರೈತರು ತಿಳಿಸಿದ್ದಾರೆ.

ಖರೀದಿ ಕೇಂದ್ರಕ್ಕೆ ರಾಗಿ ಕೊಂಡೊಯ್ಯಲು ಟ್ರ್ಯಾಕ್ಟರ್ ಬಾಡಿಗೆ ಒಂದು ದಿನಕ್ಕೆ ದೂರದ ಆಧಾರದ ಮೇಲೆ ಕನಿಷ್ಠ ಒಂದುವರೆ ಸಾವಿರ ನೀಡುವಂತಾಗಿದೆ. ಎರಡು ದಿನಗಳ ಕಾಲ ಸರದಿಯಲ್ಲಿ ಕಾದು ನಿಲ್ಲುವಂತಾದರೆ ಬಾಡಿಗೆ ಧರವು ಏರಿಕೆಯಾಗುತ್ತದೆ.

ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗಳು ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವಂತೆ ಆಹಾರ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಇನ್ನೂ ಅನುಷ್ಟಾನಕ್ಕೆ ಬಂದಿಲ್ಲ ಎಂದು ರೈತರು ದೂರಿದ್ದಾರೆ.

ಇಂದು ಬೆಳಗ್ಗೆ ಟ್ರಾಕ್ಟರ್ ಸಾಲು ಗೋದಾಮಿನಿಂದ ಗೊಲ್ಲಹಳ್ಳಿ ತಾಂಡವರೆಗೂ ಸಾಲುಗಟ್ಟಿ ನಿಂತಿದ್ದು, ಸಾಲು ಬೆಳೆಯುತ್ತಲೇ ಇದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....