ದೊಡ್ಡಬಳ್ಳಾಪುರ: ತೀವ್ರವಾದ ಕಳ್ಳರ ಹಾವಳಿ..! ‌/ ಕಾರಲ್ಲಿ ಬಂದು ಕುರಿ, ಮೇಕೆ ಹೊತ್ತೊಯ್ದ ದುಷ್ಕರ್ಮಿಗಳು / ಸಿಸಿಟಿವಿಯಲ್ಲಿ ಕಳವು ದೃಶ್ಯ ಸೆರೆ
ದೊಡ್ಡಬಳ್ಳಾಪುರ: ತೀವ್ರವಾದ ಕಳ್ಳರ ಹಾವಳಿ..! ‌/ ಕಾರಲ್ಲಿ ಬಂದು ಕುರಿ, ಮೇಕೆ ಹೊತ್ತೊಯ್ದ ದುಷ್ಕರ್ಮಿಗಳು / ಸಿಸಿಟಿವಿಯಲ್ಲಿ ಕಳವು ದೃಶ್ಯ ಸೆರೆ

ದೊಡ್ಡಬಳ್ಳಾಪುರ, (ಫೆ.06): ತಾಲೂಕಿನಲ್ಲಿ ಕುರಿ, ಮೇಕೆ ಕಳ್ಳರ ಹಾವಳಿ ಮುಂದುವರೆದಿದ್ದು, ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಕುರಿ ಮತ್ತು ಮೇಕೆಯನ್ನು ಹೊತ್ತೊಯ್ದಿರುವ ಘಟನೆ ಸೋಮವಾರ ಬೆಳಗ್ಗಿನ ಜಾವ ತಾಲೂಕಿನ ಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲಿಂಗನಹಳ್ಳಿ ಗ್ರಾಮದ ನಾಗೇಶ್ ಎನ್ನುವವರ ದೊಡ್ಡಿಯಲ್ಲಿದ್ದ ಎಂಟು ಮೇಕೆ ಮತ್ತು ಒಂದು ಕುರಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ವಿಡಿಯೋ ನೋಡಿ.

ಈ ಕುರಿತು 112ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ 112 ಪೊಲೀಸರು ಹುಡುಕಾಟ ನಡೆಸಿದರಾದರೂ, ಆ ವೇಳೆಗೆ ಕಳ್ಳರು ಪರಾರಿಯಾಗಿದ್ದಾರೆ.

ತಾಲ್ಲೂಕಿನಲ್ಲಿ ಮೇಕೆ, ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಪ್ರಕರಣ ಒಂದುಕಡೆಯಾದರೆ, ಮತ್ತೊಂದು ಕಡೆಯಲ್ಲಿ ಕಳ್ಳರ ಹಾವಳಿಯು ತೀವ್ರಗೊಂಡಿರುವುದು ಕುರಿ, ಮೇಕೆ ಸಾಕಾಣಿಕೆದಾರರು ಚಿಂತೆಗೆ ಒಳಗಾಗುವಂತೆ ಮಾಡಿದೆ. 

ಕೆಲ ದಿನಗಳ ಹಿಂದೆಯಷ್ಟೇ ಮೇಲಿನನಾಯಕರಂಡಹಳ್ಳಿ  ಗ್ರಾಮದ ನರಸಪ್ಪ ಎಂಬುವವರ ಮೇಕೆ ದೊಡ್ಡಿಯ ಬಾಗಿಲಿನ ಬೀಗ ಮುರಿದು ನಾಲ್ಕು ಮೇಕೆಗಳನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಮರುದಿನ ರಾತ್ರಿ ಮತ್ತೆ ತೋಟದಲ್ಲಿ ಮೇಕೆ ಸಾಕಾಣಿಕೆಯ ಷೆಡ್ಗೆ ಕಳ್ಳರು ನುಗ್ಗಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ  ಮಚ್ಚು, ದೊಣ್ಣೆಗಳಿಂದ ಹಲ್ಲೆಗೆ ಮುಂದಾಗುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದರು. ಮರುದಿನ ಸಹ ಗ್ರಾಮದ ಅಂಚಿನ ಮಂಜುನಾಥ್ ಅವರಿಗೆ ಸೇರಿರುವ ಮೇಕೆ ದೊಡ್ಡಿಯ ಬಾಗಿಲಿನ ಬೀಗಿ ಹೊಡೆಯುತ್ತಿದ್ದ ಶಬ್ದಕ್ಕೆ ಮಂಜುನಾಥ್ ಮನೆಯಿಂದ ಹೊರಬರುತ್ತಿದ್ದಂತೆ ಕಳ್ಳರು ಇನೋವಾ ಕಾರಿನಲ್ಲಿ ಪರಾರಿಯಾಗಿದ್ದಾರೆ.

ತಾಲ್ಲೂಕಿನಲ್ಲಿ ಆರು ತಿಂಗಳಿದ ಈಚೆಗೆ ವಿವಿಧ ಗ್ರಾಮಗಳಲ್ಲಿ ಕುರಿ, ಮೇಕೆ, ರಾಸುಗಳ ಕಳವು ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೂ ಒಂದೇ ಒಂದು ಪ್ರಕಣದಲ್ಲೂ ಕಳ್ಳರು ಪತ್ತೆಯಾಗಿಲ್ಲ. ಇದರಿಂದ ರೈತರು ಆತಂಕದಲ್ಲಿಯೇ ರಾತ್ರಿ ಕಳೆಯುವಂತೆ ಮಾಡಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--