ದೊಡ್ಡಬಳ್ಳಾಪುರ: ಶ್ರೀ ಅಭಯ ಅಂಜನೇಯಸ್ವಾಮಿ ದೇವಾಲಯದಲ್ಲಿ ಬೆಳ್ಳಿ ಕಿರೀಟ ಕಳವು
ದೊಡ್ಡಬಳ್ಳಾಪುರ: ಶ್ರೀ ಅಭಯ ಅಂಜನೇಯಸ್ವಾಮಿ ದೇವಾಲಯದಲ್ಲಿ ಬೆಳ್ಳಿ ಕಿರೀಟ ಕಳವು

ದೊಡ್ಡಬಳ್ಳಾಪುರ, (ಜ.25): ತಾಲೂಕಿನ ನಾಗಸಂದ್ರ ಗ್ರಾಮದ ಶ್ರೀ ಅಭಯ ಅಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ದೇವರ ವಿಗ್ರಹದ ಮೇಲಿದ್ದ ಕಿರೀಟ ಸೇರಿದಂತೆ ಹಲವಾರು ವಸ್ತುಗಳನ್ನು ಕಳವು ಮಾಡಲಾಗಿದೆ.

ಮಂಗಳವಾರ ದೇವಾಲಯದ ಬಾಗಿಲು ತೆರೆಯಲು ಅರ್ಚಕರು ಹೋದಾಗ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ.

ದೇವರ ವಿಗ್ರಹದ ಮೇಲಿದ್ದ ಬೆಳ್ಳಿ ಕಿರೀಟ, ಬೆಳ್ಳಿ ಹಸ್ತ, ಹುಂಡಿಯಲ್ಲಿನ ಹಣ ದೋಚಿದ್ದಾರೆ. ವಿಪರ್ಯಾಸ ಇದೇ ದೇವಾಲಯದಲ್ಲಿ ಆರು ತಿಂಗಳ ಹಿಂದೆಯಷ್ಟೇ ಕಳವು ನಡೆದಿತ್ತು.

ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....