ಹರಿತಲೇಖನಿ ದಿನಕ್ಕೊಂದು ಕಥೆ: ದ್ರೌಪದಿಯ ವಸ್ತ್ರಾಪಹರಣಕ್ಕೆ ಯತ್ನಿಸಿದ ದುಶ್ಶಾಸನ
ಹರಿತಲೇಖನಿ ದಿನಕ್ಕೊಂದು ಕಥೆ: ದ್ರೌಪದಿಯ ವಸ್ತ್ರಾಪಹರಣಕ್ಕೆ ಯತ್ನಿಸಿದ ದುಶ್ಶಾಸನ

ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು. ಇವರೇ ಕೌರವರು ಎಂದು ಪ್ರಸಿದ್ಧರಾದವರು ಮತ್ತು ಒಬ್ಬಳು ಮಗಳು ದುಶ್ಶಲೆ. ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು.

ಪಾಂಡವರು ಕಪಟದ್ಯೂತದಲ್ಲಿ ಸೋತಾಗ, ಅಣ್ಣನ ಅಪ್ಪಣೆಯ ಪ್ರಕಾರ ದುಶ್ಯಾಸನ ದ್ರೌಪದಿಯನ್ನು ಒತ್ತಾಯದಿಂದ ಸಭೆಗೆಳೆತಂದು, ವಸ್ತ್ರಾಪಹರಣದ ಪ್ರಯತ್ನ ನಡೆಸಿದ. ಆಗ, ಭೀಮಸೇನ ಈತನ ರಕ್ತ ಹೀರುವೆನೆಂದು ಪ್ರತಿಜ್ಞೆ ಮಾಡಿದ.

ಯುಧಿಷ್ಠಿರನ ರಾಜಸೂಯಯಾಗದ ಸಮಯದಲ್ಲಿ ಈತ ಆಹಾರ ವಿತರಣೆಯ ಕಾರ್ಯ ವಹಿಸಿದ್ದ. ವಿರಾಟನ ಗೋವುಗಳನ್ನು ಕದಿಯಲು ಹೊರಟ ದುರ್ಯೋಧನನ ಸೈನ್ಯವನ್ನು ಈತನೇ ಸಜ್ಜುಗೊಳಿಸಿದ. ಗೋಗ್ರಹಣ ಸಂದರ್ಭದಲ್ಲಿ ಅರ್ಜುನನೊಂದಿಗೆ ಹೋರಾಡಿ ಸೋತ.

ಕುರುಕ್ಷೇತ್ರದ ಹತ್ತನೆಯ ದಿವಸದ ಯುದ್ಧದಲ್ಲಿ ಅರ್ಜುನನೊಂದಿಗೆ ಯುದ್ಧ ಮಾಡಿ ಸೋತ. ಹದಿಮೂರನೆಯ ದಿನದ ಯುದ್ಧದಲ್ಲಿ ಅಭಿಮುನ್ಯುವಿನೊಂದಿಗೆ ಹೋರಾಡಿ ಪಾಡುಪಟ್ಟ. ಹದಿನಾಲ್ಕನೆಯ ದಿನದಲ್ಲಿ ಸಾತ್ಯಕಿಯ ಮೇಲೆ ದಾಳಿ ಮಾಡಿ ಸೋತ.

ಸಾತ್ಯಕಿಯನ್ನು ಕಂಡು ಹೆದರಿ ಓಡುತ್ತಿದ್ದ ಈತನನ್ನು ದ್ರೋಣ ಹೀಯಾಳಿಸಿದ. ಅನಂತರ ಭೀಮಸೇನನ ಮೇಲೆ ದಾಳಿ ಮಾಡಿದ. ಪ್ರತಿವಿಂದ್ಯನೊಂದಿಗೆ ಹೋರಾಡಿದ.

ಸಹದೇವ, ದೃಷ್ಟದ್ಯುಮ್ನರಿಂದಲೂ ಸೋತ. ಅರ್ಜುನನ ಮಗ ಅಭಿಮನ್ಯುವನ್ನು ಕೊಂದ. ದ್ರೌಪದಿಯ ಮಗ ಈತನ ಮಗನನ್ನು ಕೊಂದ. ಭೀಮ ಈತನನ್ನು ನೆಲಕ್ಕೆ ಕೆಡಹಿ, ಎದೆಯನ್ನು ಸೀಳಿ, ರಕ್ತಪಾನ ಮಾಡಿ, ದ್ರೌಪದಿಯ ಕೂಲಿಗೆ ರಕ್ತವನ್ನು ಬಳಿದು ಶಪಥ ತೀರಿಸಿದ.

ಕೃಪೆ: ಸಾಮಾಜಿಕ ಜಾಲತಾಣ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--