ಪ್ರಜಾದ್ವನಿ ಬ್ಯಾನರ್ ಹರಿದ ಪ್ರಕರಣ: ದೊಡ್ಡಬಳ್ಳಾಪುರ ತಾಲೂಕಿನ ಶಾಂತಿಗೆ ಭಂಗ ತಂದಲ್ಲಿ ಅದರ ಪರಿಣಾಮ ದುಷ್ಪರಿಣಾಮವಾಗಿರಲಿದೆ - ಶಾಸಕ ಟಿ.ವೆಂಕಟರಮಣಯ್ಯ ಎಚ್ಚರಿಕೆ
ಪ್ರಜಾದ್ವನಿ ಬ್ಯಾನರ್ ಹರಿದ ಪ್ರಕರಣ: ದೊಡ್ಡಬಳ್ಳಾಪುರ ತಾಲೂಕಿನ ಶಾಂತಿಗೆ ಭಂಗ ತಂದಲ್ಲಿ ಅದರ ಪರಿಣಾಮ ದುಷ್ಪರಿಣಾಮವಾಗಿರಲಿದೆ - ಶಾಸಕ ಟಿ.ವೆಂಕಟರಮಣಯ್ಯ ಎಚ್ಚರಿಕೆ

ದೊಡ್ಡಬಳ್ಳಾಪುರ, (ಜ.24): ಕಾಂಗ್ರೆಸ್ ಪ್ರಜಾದ್ವನಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಅಳವಡಿಸಲಾಗಿದ್ದ ಬೃಹತ್ ಬ್ಯಾನರ್ ಅನ್ನು ಕಿಡಿಗೇಡಿಗಳು ಸೋಮವಾರ ರಾತ್ರಿ ಹರಿದಿದ್ದ ಘಟನೆ ಕುರಿತಂತೆ ಶಾಸಕ ಟಿ.ವೆಂಕಟರಮಣಯ್ಯ ಪ್ರತಿಕ್ರಿಯೆ ನೀಡಿದ್ದು, ಗೌರವಯುತ ರಾಜಕಾರಣ ಮಾಡದಿದಲ್ಲಿ ಪರಿಣಾಮ ಎದುರಿಸಬೇಕಾಗುವುದೆಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಪ್ರಜಾದ್ವನಿ ಸಮಾವೇಶ ಮುಗಿದ ನಂತರ ಮಾಧ್ಯಮಗಳೊಂದಿಗೆ‌ ಮಾತನಾಡಿದ ಅವರು, ಜಕ್ಕಲಮಡಗು ಉದ್ಘಾಟನೆ ವೇಳೆ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಂದ ಸಂದರ್ಭದಲ್ಲಿ ನಾಲ್ಕು ಕಟೌಟ್ ಮಾಡಿಸಲಾಗಿತ್ತು. ಎರಡು ಎಸ್.ಎಂ.ಕೃಷ್ಣ ಅವರದ್ದು ಮತ್ತು ಎರಡು ಹಿರಿಯರಾದ ಆರ್.ಎಲ್‌.ಜಾಲಪ್ಪ ಅವರದ್ದು. ಆದರೆ ಜಾಲಪ್ಪ ಅವರು ನನ್ನ ಕಟೌಟ್ ಹಾಕಿಸುವುದು ಬೇಡವೆಂದು ಸಲಹೆ ನೀಡಿ. ಕಟೌಟ್ ಹಾಕಿಸಿರಲಿಲ್ಲ.

ಅಂದಿನಿಂದ ನಾನೂ ಕೂಡ ತಾಲೂಕನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿಕೊಂಡು, ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದೇನೆ. ಆ ಶಾಂತಿಗೆ ಮುಂದಿನ ದಿನಗಳಲ್ಲಿ ಭಂಗ ಉಂಟು ಮಾಡಿದರೆ ಅದರ ಪರಿಣಾಮ ದುಷ್ಪರಿಣಾಮ ಉಂಟಾಗಲಿದೆ. ನಾವು ಸಹ ನೋಡಿ, ನೋಡಿ ಸಾಕಾಗಿ ಹೋಗಿದೆ. ಗೌರವಯುತವಾಗಿ ರಾಜಕಾರಣ ಮಾಡಿ, ಗೌರವಯುತವಾಗಿ ಚುನಾವಣೆ ಎದುರಿಸಿ. ಅದನ್ನು ಹೊರತು ಪಡಿಸಿ ಗೌರವ ಬಿಟ್ಟು ನಡೆದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ‌ 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....