ದೊಡ್ಡಬಳ್ಳಾಪುರ: ಹಾನಿಗೊಳಗಾದ ಟೈಲ್ಸ್ ಸರಿಪಡಿಸುವೆ - ಶಾಸಕ ಟಿ.ವೆಂಕಟರಮಣಯ್ಯ ಭರವಸೆ
ದೊಡ್ಡಬಳ್ಳಾಪುರ: ಹಾನಿಗೊಳಗಾದ ಟೈಲ್ಸ್ ಸರಿಪಡಿಸುವೆ - ಶಾಸಕ ಟಿ.ವೆಂಕಟರಮಣಯ್ಯ ಭರವಸೆ

ದೊಡ್ಡಬಳ್ಳಾಪುರ, (ಜ.24): ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಸಿಮೆಂಟ್ ಟೈಲ್ಸ್ ಗಳಿಗೆ ಹಾನಿಯಾಗಿರುವ ಕುರಿತು, ಸಾರ್ವಜನಿಕರ ಆಕ್ರೋಶದ ವರದಿಗೆ ಶಾಸಕ ಟಿ.ವೆಂಕಟರಮಣಯ್ಯ ಪ್ರತಿಕ್ರಿಯೆ ನೀಡಿದ್ದು, ಬುಧವಾರ ಹಾನಿಗೊಳಗಾದ ಟೈಲ್ಸ್ ಗಳನ್ನು ಮರು ಜೋಡಣೆ ಕಾಮಗಾರಿ ನಡೆಸಲಾಗುವುದೆಂದು ಭರವಸೆ ನೀಡಿದ್ದಾರೆ.

ಈ ಕುರಿತಂತೆ ಹರಿತಲೇಖನಿಗೆ ಮಾತನಾಡಿರುವ ಶಾಸಕ ಟಿ.ವೆಂಕಟರಮಣಯ್ಯ, ಕಾಂಗ್ರೆಸ್ ಪ್ರಜಾದ್ವನಿ ಸಮಾವೇಶದ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕು ಸಮಿತಿ ದ್ವಜಗಳ ಅಳವಡಿಕೆ ವೇಳೆ ಕೆಲವೆಡೆ ಪಾದಾಚಾರಿ ಮಾರ್ಗದ ಸಿಮೆಂಟ್ ಟೈಲ್ಸ್ ಹಾನಿಗೀಡಾಗಿರುವುದು ಗಮನಕ್ಕೆ ಬಂದಿದೆ.

ಈ ಕುರಿತಂತೆ ಬುಧವಾರ ಬೆಳಗ್ಗೆ ಖುದ್ದಾಗಿ ಸ್ಥಳಕ್ಕೆ ಬಂದು, ಸಿಮೆಂಟ್ ಬಳಸಿ ಟೈಲ್ಸ್ ಗಳನ್ನು ಮರು ಸರಿಪಡಿಸಲಾಗುವುದೆಂದು ಭರವಸೆ ನೀಡಿದ್ದಾರೆ.

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಲಿರುವ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಸಮಾವೇಶದ ಪೂರ್ವಸಿದ್ದತೆಗಳು ಭರದಿಂದ ಸಾಗುತ್ತಿವೆ.

ಪ್ರಜಾಧ್ವನಿ ಯಾತ್ರೆಯ ಸಮಾವೇಶಕ್ಕೆ ವಿಶಾಲವಾದ ಗಣ್ಯರ ವೇದಿಕೆ, ಕಾರ್ಯಕರ್ತರಿಗಾಗಿ 50 ಸಾವಿರ ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಸೇರಿದಂತೆ ಇತರೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಸಮಾವೇಶದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ,ಶಾಸಕ ಟಿ.ವೆಂಕರಮಣಯ್ಯರಾದಿಯಾಗಿ ಕಾಂಗ್ರೆಸ್‍ನ ರಾಜ್ಯ ಮುಖಂಡರು ಭಾಗಿಯಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್, ಬಂಟಿಂಗ್ ಅಳವಡಿಸಲುವ ವೇಳೆ ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಸಿಮೆಂಟ್ ಟೈಲ್ಸ್ ಗಳಿಗೆ ಹಾನಿಯಾಗಿತ್ತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--