ದೊಡ್ಡಬಳ್ಳಾಪುರ: ಇಂದು (ಡಿ.30) ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳ ಪಾಲಿಗೆ ಕಾರಳ ದಿನ. 2009 ಡಿಸೆಂಬರ್ 30ರ ಮುಂಜಾನೆ ಬಂದ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗ ದಂತಹ ನೋವನ್ನು ನೀಡಿತು.
ಇಂದಿನ ದಿನಕ್ಕೆ ವಿಷ್ಣು ದಾದಾ ಇಲ್ಲದೇ 15 ವರ್ಷ. ಈ ಹದಿನೈದು ವರ್ಷಗಳಲ್ಲಿ ಅಭಿಮಾನಿಗಳು ಅವರನ್ನು ಎಂದಿಗೂ ಮರೆತಿಲ್ಲ. ಅವರ ಸಿನಿಮಾ, ಹಾಡು, ಸಮಾಜಮುಖೀ ಕಾರ್ಯಗಳ ಮೂಲಕ ಸದಾ ಜೀವಂತವಾಗಿರಿಸಿದ್ದಾರೆ.
ಅಂತೆಯೇ ದೊಡ್ಡಬಳ್ಳಾಪುರ ನಗರದ ಬಸ್ ನಿಲ್ದಾಣದ ಬಳಿ ಡಾ!!ವಿಷ್ಣುವರ್ಧನ್ ಅಭಿಮಾನಿಗಳ ಬಳಗ ಹಾಗೂ ಡಾ||ವಿಷ್ಣು ಸೇನಾ ಸಮಿತಿವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಅನ್ನ ಸಂತರ್ಪಣೆ ನಡೆಸಲಾಯಿತು.
ಈ ವೇಳೆ ಅಭಿಮಾನಿಗಳಾದ ಶಿವಕುಮಾರ್, ರಾಮಾಂಜಿನಪ್ಪ, ಪುಮಹೇಶ್, ಭಾರ್ಗವ, ಗಂಗರಾಜು, ನಾಗೇಶ್, ಆನಂದ್, ಮುನಿಆಂಜಿನಪ್ಪ, ಮಲ್ಲೇಶ್, ಗಿರೀಶ್, ಗಣೇಶ್ ಮತ್ತಿತರರಿದ್ದರು.