ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ (Manmohan Singh) ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್ ಬೋನ್ ನಲಿ ಸಿಖ್ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಿದ್ದು, ಪಂಚಭೂತಗಳಲ್ಲಿ ಮನಮೋಹನ್ ಸಿಂಗ್ ಲೀನರಾಗಿದ್ದಾರೆ.
ಶ್ರೀ ಗುರು ಗ್ರಂಥ ಸಾಹಿಬ್ ಜಿ ರಿಂದ ಅಂತಿಮ ವಿಧಿವಧಾನ ಕಾರ್ಯದ ನೇತೃತ್ವ ವಹಿಸಿದ್ದು, ಮನಮೋಹನ್ ಸಿಂಗ್ ಪಾರ್ಥಿವ ಶರೀರದ ಮುಂದೆ ಸುಮಾರು 30 ನಿಮಿಷಗಳ ಕಾಲ ಮಂತ್ರ ಪಡಿಸಲಾಯಿತು.
ಮೊದಲಿಗೆ ಪಾರ್ಥಿವ ಶರೀರದ ಸುತ್ತ ಕಟ್ಟಿಗೆಯನ್ನ ಸಂಬಂಧಿಕರು ಜೋಡಿಸಿದ್ದರು. ಸಿಖ್ ಸಂಪ್ರದಾಯದಂತೆ ದೇವರ ಶ್ಲೋಕ ಪಠಣೆ ಮಾಡಿ ವಿವಿಧ ಪೂಜೆ ನೆರವೇರಿಸಲಾಯ್ತು.
ನಂತರ ಗುರುಗಳ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಕುಟುಂಬದ ಹಿರಿಯ ವ್ಯಕ್ತಿಯಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯ್ತು.
ಇದಕ್ಕೂ ಮುನ್ನ ಸೇನಾಧಿಕಾರಿಯಿಂದ 3 ಸುತ್ತು ಗುಂಡು ಹಾರಿಸಲಾಯ್ತು. ಆ ಮೂಲಕ ಹಿರಿಯ ನಾಯಕನಿಗೆ ಗೌರವ ಸಲ್ಲಿಸಲಾಯ್ತು.
ರುದ್ರಭೂಮಿಗೆ ಬಂದಿದ್ದ ಪ್ರತಿಯೊಬ್ಬರು ಡಾ.ಸಿಂಗ್ ಪತ್ನಿಗೆ ಸಾಂತ್ವನ ಹೇಳಿದರು. ಭಾರತೀಯ ಅರ್ಥಶಾಸ್ತ್ರ ಲೋಕದ ಮೇರು ಕೊಂಡಿಯ ಯುಗಾಂತ್ಯವಾಗಿದ್ದು, ಬಾರದೂರಿಗೆ ಮನಮೋಹನ್ ಸಿಂಗ್ ಪ್ರಯಣಿಸಿದ್ದಾರೆ.
ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು.