ಚಿಕ್ಕಬಳ್ಳಾಪುರ: ಸಿಎನ್ಜಿ ಗ್ಯಾಸ್ ಸಿಲಿಂಡರ್ಗಳನ್ನು ತುಂಬಿದ್ದ ಕ್ಯಾಂಟರ್ವೊಂದಕ್ಕೆ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಗಳ ನಡುವೆ ಡಿಕ್ಕಿ (Accident) ಸಂಭವಿಸಿ, ಭೀಕರ ಅಗ್ನಿ ಅನಾಹುತ ಸಂಭವಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44ರ ಹುನೇಗಲ್ ಗ್ರಾಮದಲ್ಲಿ ಸಂಭವಿಸಿದೆ.
ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ಎರಡೂ ಲಾರಿಗಳಲ್ಲಿದ್ದ ಚಾಲಕರು ಹಾಗೂ ಕ್ಲೀನರ್ಗಳಿಗೆ ಗಾಯಗಳಾಗಿವೆ.
ಸಿಎನ್ಜಿ ಗ್ಯಾಸ್ ಸಿಲೆಂಡರ್ಗಳನ್ನು ತುಂಬಿದ್ದ ಕ್ಯಾಂಟರ್ ಹುನೇಗಲ್ ಬಳಿ ಯೂ ಟರ್ನ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಸಿಎನ್ಜಿ ಗ್ಯಾಸ್ ಸಿಲೆಂಡರ್ಗಳು ಸ್ಪೋಟಗೊಂಡು ಬೆಂಕಿ ಆವರಿಸಿದೆ.
ಬೆಂಕಿಯ ಕೆನ್ನಾಲಿಗೆ ಹಲವು ಅಡಿ ಎತ್ತರ ಚಿಮ್ಮಿದ್ದು, ಸುತ್ತಮುತ್ತ ಇದ್ದ ಸ್ಥಳೀಯರು ಹಾಗೂ ವಾಹನ ಸವಾರರನ್ನು ಆತಂಕಕ್ಕೀಡು ಮಾಡಿತ್ತು.
ಘಟನೆಯಲ್ಲಿ ಎರಡೂ ಲಾರಿಗಳ ಇಬ್ಬರು ಚಾಲಕರು ಹಾಗೂ ಓರ್ವ ಕ್ಲೀನರ್ಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಬೆಂಗಳೂರಿನ ದಾಖಲಿಸಲಾಗಿದೆ.
ಘಟನೆಯಿಂದ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬೆಂಕಿ ನಂದಿಸಿ ಎರಡು ವಾಹನಗಳನ್ನೂ ರಸ್ತೆ ಬದಿ ನಿಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.