ಕಲಬುರಗಿ (Bhagyavanti devi): ಭಕ್ತರು ತಮ್ಮ ಬಯಕೆಯ ಈಡೇರಿಕೆಗಾಗಿ ಪ್ರಾರ್ಥನೆ ಮಾಡಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸುತ್ತಾರೆ. ದೇವರ ಹುಂಡಿಯ ಎಣಿಕೆ ಸಂದರ್ಭದಲ್ಲಿ ಈ ರೀತಿ ಭಕ್ತರು ದೇವರ ಮುಂದೆ ತೋಡಿಕೊಂಡ ಬಗೆಬಗೆಯ ಬೇಡಿಕೆಗಳು ಆಗಾಗ್ಗೆ ಗಮನ ಸೆಳೆಯುತ್ತವೆ.
ಆದರೆ ಇಲ್ಲೊಬ್ಬರು ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ತಾಯಿ ಎಂದು ಹತ್ತು 20 ರೂ ನೋಟಿನ ಮೇಲೆ ಬರೆದು ಭಾಗ್ಯವಂತಿ ದೇವಸ್ಥಾನದ ಹುಂಡಿಗೆ ಹಾಕಿರುವುದು ಕಲಬುರಗಿಯಲ್ಲಿ ನಡೆದಿದೆ.
ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ, ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು. ತಾಯಿ ಎಂದು 20 ರೂ. ನೋಟಿನಲ್ಲಿ ಬರೆದಿರುವುದು ಕಂಡುಬಂದಿದೆ. ಆದರೆ ಈ ರೀತಿಯ ವಿಚಿತ್ರ ಹರಕೆಯನ್ನು ಹೊತ್ತಿರುವುದು ಅಳಿಯನೋ ಅಥವಾ ಸೊಸೆಯೋ ಎಂದು ತಿಳಿದು ಬಂದಿಲ್ಲ.
ಪ್ರತಿ ವರ್ಷ ಕಾಣಿಕೆ ಹುಂಡಿ ತೆರೆದು ಭಕ್ತರ ಕಾಣಿಕೆಯ ಎಣಿಕೆ ಮಾಡಲಾಗುತ್ತದೆ. ವಾರ್ಷಿಕ ಹುಂಡಿ ಹಣ ಎಣಿಕೆ ವೇಳೆ 60 ಲಕ್ಷ ರೂ. ನಗದು, ಒಂದು ಕೆಜಿ ಬೆಳ್ಳಿ ಜಮಾ ಆಗಿದೆ ಎಂದು ವರದಿಯಾಗಿದೆ.