ದೊಡ್ಡಬಳ್ಳಾಪುರ: ಜಾಗತಿಕ ಭಾರತದ ಶಿಲ್ಪಿ, ಉದಾರ ಆರ್ಥಿಕತೆಯ ಪಿತಾಮಹ ಭಾರತದ ಸರ್ವಶ್ರೇಷ್ಠ ವಿತ್ತ ಸಚಿವ, ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ (Manmohan Singh) ಅವರ ಅಗಲಿಕೆ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಸಂತಾಪ ಸೂಚಿಸಿದ್ದಾರೆ..
ಈ ಕುರಿತು ಸಂತಾಪ ನುಡಿಗಳಲ್ಲಿ
ಮನಮೋಹನ ಸಿಂಗ್ ಅವರ ನಿಧನದಿಂದ ಭಾರತವು ಒಬ್ಬ ದೂರ ದೃಷ್ಟಿಯ ರಾಜನೀತಿ ತಜ್ಞ, ಸಮಗ್ರತೆಯ ನಾಯಕ ಮತ್ತು ಅಪ್ರತಿಮ ಅರ್ಥಶಾಸ್ತ್ರಜ್ಞನನ್ನು ಕಳೆದುಕೊಂಡಿದೆ ಎಂದಿದ್ದಾರೆ.
ರಾಷ್ಟ್ರ ನಿರ್ಮಾಣಕ್ಕೆ ಅವರ ಅಪಾರ ಕೊಡುಗೆ ಭಾರತೀಯ ಇತಿಹಾಸದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ದುಃಖದ ಕ್ಷಣದಲ್ಲಿ, ನಾನು ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಹೃತೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದೊಡ್ಡ ನಷ್ಟವನ್ನು ನೀಗಿಸುವ ಶಕ್ತಿ ಅವರಿಗೆ ಸಿಗಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ದೊಡ್ಡಬಳ್ಳಾಪುರ ಕಾಂಗ್ರೆಸ್ ಸಮಿತಿವತಿಯಿಂದ ಮನಮೋಹನ್ ಸಿಂಗ್ ಅಗಲಿಕೆಗೆ ಸಂತಾಪವನ್ನು ಜಿ.ಲಕ್ಷ್ಮೀಪತಿ ಸಲ್ಲಿಸಿದ್ದಾರೆ.