ದೊಡ್ಡಬಳ್ಳಾಪುರ: ತಾಲ್ಲೂಕಿನ ಗುಂಡಮಗೆರೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ (VSSN) 6 ನಿರ್ದೇಶಕ ಸ್ಥಾನಕ್ಕೆ ಭಾನುವಾರ ಮತದಾನ ನಡೆಯಿತು.
ಚುನಾವಣೆ ಅಧಿಕಾರಿ ಭಾಸ್ಕರ್ (ಸಹಕಾರ ಇಲಾಖೆ ರಿಟರ್ನಿಂಗ್ ಆಫೀಸರ್ ), ಸಹಾಯಕ ಚುನಾವಣೆ ಅಧಿಕಾರಿ ಪುನಿತ್ ಕುಮಾರ್ ಜಿಎನ್ (ಕಾರ್ಯದರ್ಶಿ VSSN ಗುಂಡಮಗೆರೆ) ಸಮ್ಮುಖದಲ್ಲಿ ಚುನಾವಣೆ ನಡೆಸಲಾಯಿತು.
12 ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಕೃಷ್ಣರೆಡ್ಡಿ, ನರಸಪ್ಪ, ಬಾಲನರಸಿಂಹಯ್ಯ, ಸರೋಜಮ್ಮ, ವನಜ, ನಿರ್ಮಲ ಕುಮಾರಿ ಜಿಎನ್ ಸೇರಿ 6 ಜನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 6 ಆರು ಕ್ಷೇತ್ರಗಳಿಗೆ ಭಾನುವಾರ ಚುನಾವಣೆ ನಡೆಸಲಾಯಿತು.
ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕಮಲ-ದಳ ಮೈತ್ರಿ ಬೆಂಬಲಿತ 11 ಮಂದಿ ನಾಮಪತ್ರ ಸಲ್ಲಿಸಿದ್ದರು.
ಇವರಲ್ಲಿ ಕಾಂಗ್ರೆಸ್ ಬೆಂಬಲಿತ ಅಭಿವೃದ್ಧಿಗಳಾದ ಗಂಗಾಧರಪ್ಪ, ಗೋಪಾಲಕೃಷ್ಣ, ರಾಮಕೃಷ್ಣಪ್ಪ, ಲಕ್ಷ್ಮಣ್.ಎನ್., ಮುದ್ದರಾಮಯ್ಯ, ಕನಕರಾಜು ನಿರ್ದೇಕರಾಗಿ ಆಯ್ಕೆಯಾಗಿದರು. ಆ ಮೂಲಕ ಗುಂಡಮಗೆರೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ನಿರ್ದೇಶಕರಾಗಿ 12 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಅಣ್ಣಯ್ಯಪ್ಪ, ಜಯರಾಂ, ಎಲ್.ನಾಗರಾಜು, ಮೋಹನ್ ಕುಮಾರ್, ವೆಂಕಟರಾಮಯ್ಯ, ನರಸಿಂಹಮೂರ್ತಿ, ವಿಜಯ್ ಕುಮಾರ್, ಆನಂದ್ ಕುಮಾರ್, ವೆಂಕಟೇಶಯ್ಯ, ವೀರ ಕೃಷ್ಣ ರೆಡ್ಡಿ, ನರೇಶ್ ಕುಮಾರ್ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.