ಬೆಳಗಾವಿ: ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನದ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರು ಅಶ್ಲೀಲ ಪದ ಬಳಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.
ಸಿ.ಟಿ ರವಿ ಬಳಸಿದ ಪದ ಬಳಕೆಯ ಎರಡು ಪ್ರತ್ಯೇಕ ವಿಡಿಯೋ ರೀಲಿಸ್ ಮಾಡಿ ಬಿಜೆಪಿಗೆ ಕೌಂಟರ್ ನೀಡಿದ್ದಾರೆ.
ಒಂದು ವಿಡಿಯೋದಲ್ಲಿ ಸಿಟಿ ರವಿ ಆಕ್ಷೇಪಾರ್ಹ ಪದ ಬಳಸಿದ್ದು, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಟ್ ಅಂದಿದ್ದ ವಿಡಿಯೋ ರಿಲೀಸ್ ಮಾಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. 26 ವರ್ಷ ಸಂಘರ್ಷದಿಂದ ಮೇಲೆ ಬಂದಿದ್ದೇನೆ, ನಾನೇನು ರೆಡ್ ಕಾರ್ಪೆಟ್ ಮೇಲೆ ಬಂದಿಲ್ಲ, 26 ವರ್ಷಗಳ ಸಂಘರ್ಷದ ಬದುಕು ನನ್ನದು.
ಸಿ.ಟಿ ರವಿ ಈಗ ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ.
ನಾನು ಮತ್ತೆ ಸಭಾಪತಿಗೆ ದೂರು ಕೊಡ್ತಿನಿ, ನಾನು ಸಿಟಿ ರವಿ ವಿರುದ್ಧ ಹೋರಾಟ ಮಾಡ್ತಿನಿ. ನನ್ನ ಬಳಿ ಇರೋ ದಾಖಲೆಯನ್ನು ಬಿಡುಗಡೆ ಮಾಡ್ತಿನಿ.
ಪೊಲೀಸ್ ತನಿಖೆ ಬೇಗ ಆಗಬೇಕು, ಎಫ್ ಎಸ್ ಎಲ್ ವರದಿ ಬೇಗ ಬಹಿರಂಗವಾಗಬೇಕು. ಬಿಜೆಪಿಯವರು ಸಿಟಿ ರವಿ ಬೆನ್ನಿಗೆ ನಿಂತಿದ್ದಾರೆ. ಏನಾಗಿದೆ ಗಾಯ, ಎಷ್ಟಾಗಿದೆ ಗಾಯ..? ಎನ್ ಕೌಂಟರ್ ಅಂತಿರಾ ನಾಚಿಕೆ ಆಗಲ್ವಾ.. ಇಡೀ ಕರ್ನಾಟಕ ರಾಜ್ಯದ ಜನ ಛೀಮಾರಿ ಹಾಕ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಎನ್ ಮಾಡಬೇಕು ಮಾಡಿದ್ದಾರೆ.
ಮೂಲ ಕಾರಣ ಬಿಟ್ಟು ಉಳಿದಿದ್ದು ಹೇಳಿತ್ತಿದ್ದಾರೆ. ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಎಲ್ಲಾ ನ್ಯಾಯಾಲಯ ಮುಗಿದ ಮೇಲೆ ದೇವನೊಬ್ಬನು ಇದ್ದಾರೆ.
ಪ್ರಧಾನಿ, ರಾಷ್ಟ್ರಪತಿ ಪತ್ರ ಬರುತ್ತೇನೆ, ಸಾಧ್ಯವಾದ್ರೆ ಭೇಟಿ ಯಾಗುತ್ತೇನೆ. ರಾಜಕೀಯ ಹಿಂದಕ್ಕೆ ಸೇರಿಸಬೇಕು ಮಾನ, ಮಾರ್ಯಾದೆ ಇಲ್ಲದವರು ಈ ರೀತಿಯ ಯತ್ನ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿವೇಶನದ ಕೊನೆಯ ದಿನ ಕಲಾಪದ ವೇಳೆ ನಡೆದ ಗದ್ದಲದಲ್ಲಿ ಸಿ.ಟಿ. ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಳರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಳರ್ ಕೊಲೆಗಾರ ಎಂದು ನಿಂದಿಸಿದ್ದರೆ, ಸಿಟಿ ರವಿ ಅಶ್ಲೀಲ ಪದವೊಂದನ್ನು ಬಳಸಿದ್ದರು.
ಬಳಿಕ ಸಿ.ಟಿ. ರವಿಯವರನ್ನು ಬಂಧಿಸಲಾಗಿತ್ತು ಹೈಕೋರ್ಟ್ ಆದೇಶದ ಬಳಿಕ ಸಿ.ಟಿ. ರವಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ಇಂದು ಬೆಳಗ್ಗೆಯಷ್ಟೇ ಸಭಾಪತಿ ಬಸವರಾಜ ಹೊರಟ್ಟಿ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಇಬ್ಬರ ದೂರನ್ನೂ ಸ್ವೀಕರಿಸಿದ್ದೇನೆ. ರಾಜಿ ಸಂಧಾನದ ಮೂಲಕ ಪ್ರಕರಣಕ್ಕೆ ತೆರೆಯೆಳೆಯುವಂತೆ ಸಲಹೆ ನೀಡಿದ್ದೇನೆ ಎಂದಿದ್ದರು. ಈ ಬೆನ್ನಲ್ಲೇ ವಿಡಿಯೋ ಬಿಡುಗಡೆ ಮಾಡಿರುವ ಲಕ್ಷ್ಮಿ ಹೆಬ್ಬಾಳ್ವರ್ ಸಂಧಾನದ ಮಾತೇ ಇಲ್ಲ ಎಂಬ ಸೂಚನೆ ನೀಡಿದ್ದಾರೆ.