ನವದೆಹಲಿ: ಭಾರತದ ಸೇನೆಯ ಸಾಧನೆಯ ಪುಟಗಳಲ್ಲಿ ಕಾರ್ಗಿಲ್ ಯುದ್ಧ ದೊಡ್ಡ ಸ್ಥಾನ ಹೊಂದಿದೆ. ಈ ಯುದ್ಧದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಸಂಚು ಹಾಗೂ ಸೈನಿಕರ ಒಳನುಸುಳುವಿಕೆ ಬಗ್ಗೆ ಭಾರತೀಯರಿಗೆ ಮಾಹಿತಿ ನೀಡಿದ್ದ ಕುರಿಗಾಹಿ ತಾಶಿ ನಮಗ್ಯಾಲ್ (Tashi Namgyal) ನಿಧನರಾಗಿದ್ದಾರೆ.
58 ವರ್ಷದ ತಾಶಿ ನಮಗ್ಯಾಲ್, 1999ರಲ್ಲಿ ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆ ಬಗ್ಗೆ ಸೂಕ್ತ ಸಮಯದಲ್ಲಿ ಭಾರತೀಯ ಸೇನೆಯ ಗ್ರೂಪ್ ಗಳನ್ನ ಅಲರ್ಟ್ ಮಾಡಿದ್ದರು. ಇದರಿಂದ ಎಚ್ಚೆತ್ತಿದ್ದ ಸೇನೆ ಕಾರ್ಯಾರಂಭ ಮಾಡಿ ಶತ್ರುಗಳನ್ನ ಸದೆಬಡಿದಿತ್ತು.
ಪರ್ವತ ಶ್ರೇಣಿಯ ಮಧ್ಯದಲ್ಲಿ ಪಾಕಿಸ್ತಾನಿ ಸೈನಿಕರು ಬಂಕರ್ ಗಳನ್ನ ಅಗೆಯುತ್ತಿದ್ದದ್ದನ್ನ ಗಮನಿಸಿದ್ದ ನಮಗ್ಯಾಲ್, ತಕ್ಷಣ ಪಾಕಿಸ್ತಾನದ ಯತ್ನವನ್ನ ವಿಫಲಗೊಳಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು.
ತಾಶಿ ನಮ್ಗ್ಯಾಲ್ ಅವರ ಹಠಾತ್ ನಿಧನಕ್ಕೆ ಸೇನೆ ಗೌರವ ಸಲ್ಲಿಸಿದೆ.