ಅಮರಾವತಿ: ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ ಮತ್ತು ದೌರ್ಜನ್ಯ ಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (mohan bhagwat) ಕಳವಳ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಅಮರಾವತಿಯಲ್ಲಿರುವ ‘ಮಹಾನುಭವ ಆಶ್ರಮ’ದ ಶತಮಾನೋತ್ಸವ ಸಮಾರಂಭದಲ್ಲಿ ಮಾತ ನಾಡಿ, ಧರ್ಮ ಮುಖವಾಗಿದ್ದು ಅದನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಧರ್ಮದ ಅಸಮರ್ಪಕ ಮತ್ತು ಅಪೂರ್ಣ ಜ್ಞಾನವು ಆಧರ್ಮಕ್ಕೆ ಕಾರಣವಾಗುತ್ತದೆ. ಧರ್ಮದ ಹೆಸರಿನಲ್ಲಿ ಪ್ರಪಂಚದಾದ್ಯಂತ ನಡೆದ ಎಲ್ಲಾ ಶೋಷಣೆ ಮತ್ತು ದೌರ್ಜನ್ಯಗಳು ವಾಸ್ತವವಾಗಿ ನಡೆದಿರುವುದು ತಪ್ಪು ತಿಳುವಳಿಕೆ ಮತ್ತು ಧರ್ಮದ ತಿಳುವಳಿಕೆಯ ಕೊರತೆಯಿಂದ. ಆದ್ದರಿಂದ ಧರ್ಮದ ಕುರಿತು ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ ಎಂದರು.
ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ರಾಮ ಮಂದಿರದಂತಹ, ಮಂದಿರ-ಮಸೀದಿ ವಿವಾದಗಳನ್ನು ಕೆದಕುವುದು ಸರಿಯಲ್ಲ. ಇಂತಹ ವಿಚಾರಗಳಿಂದ ಹಿಂದೂ ಮುಖಂಡರಾಗಬಹುದು ಅಂದುಕೊಳ್ಳುವುದು ತಪ್ಪು ಎಂದು ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.