ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya sammelana) ನಡೆಯುತ್ತಿದ್ದು, ಶನಿವಾರ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಸಾಹಿತ್ಯ ಹಾಗೂ ಸಂಗೀತದ ಜುಗಲ್ ಬಂಧಿಗೆ ಸಾಕ್ಷಿಯಾದ ಈ ಸಂಗೀತ ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು.
ವೇದಿಕೆಯಲ್ಲಿ ಅಧ್ಯಕ್ಷ ಅಧ್ಯಕ್ಷ ಹಾಡಿಗೆ ಸಚಿವ ಚಲುವರಾಯಸ್ವಾಮಿ ಜೊತೆ, ಶಾಸಕರಾದ ನರೇಂದ್ರ ಸ್ವಾಮಿ, ಗಣಿಗ ರವಿ ಕುಣಿದು ಕುಪ್ಪಳಿಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಸ್ಟೆಪ್#kanadaSahityaSammelana #Chaluvarayaswamy pic.twitter.com/J7tDETdgPm
— Harithalekhani (@harithalekhani) December 22, 2024
ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡ ಸಂಭ್ರಮ ಸಚಿವ ಚಲುವರಾಯಸ್ವಾಮಿ ಮುಖದಲ್ಲಿ ಕಂಡುಬಂತು.