ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ ಎಂದು ಅಭಿಮಾನಿಗಳ ಆಕ್ರೋಶ| Darshan

ಬೆಂಗಳೂರು: ಗೆಳೆತಿಗೆ ಅಶ್ಲೀಲ ಸಂದೇಶ ಕಳಿಸಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಅವರಿಗೆ ಜಾಮೀನು ದೊರೆತಿದ್ದು, ಮೈಸೂರಿನ ಅವರ ತೋಟಕ್ಕೆ ತೆರಳಲು ಕೂಡ ನ್ಯಾಯಾಲಯ ಅನುಮತಿ ನೀಡಿದೆ.

ಹತ್ಯೆ ಆರೋಪದಡಿ ಬಂಧನವಾದಂದಿನಿಂದ ದರ್ಶನ್ ಅವರ ವಿರುದ್ಧ ಅಳತೆ ಮೀರಿ ವರದಿ ಪ್ರಕಟಿಸಿ, ತೇಜೋ ವಧೆ ಮಾಡಿದ ಕೆಲ ಖಾಸಗಿ ಸುದ್ದಿವಾಹಿನಿಗಳ ಬಗ್ಗೆ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ರಾಜ್ಯದ ಜನತೆ ಛೀ, ಥೂ ಎಂದು ನಿಂದನೆಗೆ ಒಳಗಾದರು, ದರ್ಶನ್ ಕುರಿತು ಭಜನೆಯನ್ನು ಮಾತ್ರ ಬಿಟ್ಟಿಲ್ಲ.

ದರ್ಶನ್ ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಲು ಜಾಮಿನು ಪಡೆದಿದು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ರೆಗ್ಗಿಲರ್ ಬೇಲ್ ದೊರೆತ ನಂತರ ಈಗ ಮೈಸೂರಿ‌ನ ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕೆಲ ಖಾಸಗಿ ವಾಹಿನಿಗಳಿಗೆ ದರ್ಶನ್ ಸುದ್ದಿ ಪ್ರಸಾರ ಮಾಡದಿದ್ದರೆ ತಿಂದಿದ್ದು ಅರಗದು ಎಂಬಂತೆ ಮತ್ತೆ ಚೇಸ್ಟೆ ಆರಂಭಿಸಿದ್ದು, ಅವರ ವಯಕ್ತಿಕ ಜೀವನದ ಗೌಪ್ಯತೆ ಕಾಪಾಡಬೇಕೆಂಬ ಸೆನ್ಸ್ ಇಲ್ಲದೆ, ಕದ್ದು ವಿಡಿಯೋ ಸೇರೆ ಹಿಡಿದು, ಬೇಕಾಬಿಟ್ಟಿ ಸುಳ್ಳು ವರದಿ ಪ್ರಸಾರ ಮಾಡುತ್ತಿವೆ ಎಂದು ಅಭಿಮಾನಿಗಳು ಕೆಲ ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೆಗ್ಯುಲರ್​ ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ದಾಸ ಡಿಸ್ಚಾರ್ಜ್, ತೋಟದಲ್ಲಿ ಜಾಲಿ ಮೂಡು, ಈಗ ಬೆನ್ನುನೋವ್ ಕಾಣೆಯಾಗಿದೆ‌. ಈಗ ಲಕ್ವಾ ಹೊಡಿಯುವ ಕಾಲ್ ನೋವ್ ಇಲ್ವಾ..? ಎಂಬಂತೆ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಅಲ್ಲದೆ ಗೃಹ ಸಚಿವರು, ಪೊಲೀಸ್ ಕಮಿಷನರ್ ಸಿಕ್ಕ ತಕ್ಷಣ. ನಾಡಿನ ಎಲ್ಲಾ ಸಮಸ್ಯೆ ಬಿಟ್ಟು, ಕೇವಲ ದರ್ಶನ್ ಕುರಿತಾದ ಪ್ರಶ್ನೆ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ‌.

ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದ್ದು, ಸುಳ್ಳು ನ್ಯೂಸ್ ಮಾಡುತ್ತಿರುವ ನ್ಯೂಸ್ ಚಾನೆಲ್ ಗಳಿಗೆ ಒಂದು ವಿಡಿಯೋ ದರ್ಶನ್ ಸರ್ ಅವರು ಇನ್ನೂ ಕಾಲ್ ನೋವಿನಿಂದ ಕುಂಟುತಲೇ ಇದ್ದಾರೆ, ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಕಾಲಾಯ ತಸ್ಮೈ ನಮಃ🙏🏽 ಎಂದು ತಿರುಗೇಟು ನೀಡುತ್ತಿದ್ದಾರೆ.

ಇದನ್ನು ನೋಡಿ; https://www.facebook.com/share/v/1Yag1TkHah

ದರ್ಶನ್ ಬಂಧನದ ನಂತರ ಬೆಳವಣಿಗೆ ಕುರಿತು ಕೆಲ ಖಾಸಗಿ ಸುದ್ದಿ ವಾಹಿನಿಗಳ ಅತಿರೇಖದ ವರದಿಗಳು ದರ್ಶನ್ ಅಭಿಮಾನಿಗಳನ್ನು ಕೆರಳಿಸಿರುವುದು ಸುಳ್ಳಲ್ಲ‌. ಈಗಾಗಲೇ ಸುದ್ದಿವಾಹಿನಿಗಳ ವಿರುದ್ಧ ಸ್ಲೋಗನ್ ಆರಂಭಿಸಿರುವ ಅಭಿಮಾನಿಗಳು, ಖಾಸಗಿ ಸುದ್ದಿವಾಹಿನಿಗಳು ಕಂಡಲಿ ಕೂಗುತ್ತಿದ್ದಾರೆ. ಇದು ಯಾವ ಹಂತಕ್ಕೆ ಹೋಗುವುದೋ ಕಾದು ನೋಡಬೇಕಿದೆ.

ರಾಜಕೀಯ

ಬಿಜೆಪಿಗೆ ತಿರುಗೇಟು; ಬೆಲೆ ಏರಿಕೆ ಖಂಡಿಸಿ ಕೈಕಲಿಗಳ ಪ್ರತಿಭಟನೆ.. ಸಿಲಿಂಡರ್ ಹೊತ್ತ ಡಿಕೆಶಿI Congress

ಬಿಜೆಪಿಗೆ ತಿರುಗೇಟು; ಬೆಲೆ ಏರಿಕೆ ಖಂಡಿಸಿ ಕೈಕಲಿಗಳ ಪ್ರತಿಭಟನೆ.. ಸಿಲಿಂಡರ್ ಹೊತ್ತ ಡಿಕೆಶಿI

ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದು, ಸರ್ಕಾರದ ಸಚಿವರು ಕೂಡ. Congress. Vs BJP

[ccc_my_favorite_select_button post_id="105439"]
ಹಳ್ಳಿಗಳ ಸಮಗ್ರ ಅಭಿವೃದ್ಧಿ ನರೇಗಾ: ಬೆಂ.ಗ್ರಾ.ಜಿಲ್ಲೆಗೆ 4ನೇ ಸ್ಥಾನ| Mgnarega

ಹಳ್ಳಿಗಳ ಸಮಗ್ರ ಅಭಿವೃದ್ಧಿ ನರೇಗಾ: ಬೆಂ.ಗ್ರಾ.ಜಿಲ್ಲೆಗೆ 4ನೇ ಸ್ಥಾನ| Mgnarega

ದೇವನಹಳ್ಳಿ ತಾಲ್ಲೂಕು ಶೇ 113.48%, ದೊಡ್ಡಬಳ್ಳಾಪುರ l ಶೇ 104.19%, ಹೊಸಕೋಟೆ 139.30% ಮತ್ತು ನೆಲಮಂಗಲ ತಾಲ್ಲೂಕು ಶೇ 91.38% Mgnarega Harithalekhani

[ccc_my_favorite_select_button post_id="105446"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ರಾಜಕೀಯ ಚೆಸ್ ಆಟವಿದ್ದಂತೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ನಾವು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು. ರಾಜಕೀಯದಲ್ಲಿ DK Shivakumar

[ccc_my_favorite_select_button post_id="105178"]
ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಬರ್ಬರ ಕೊಲೆ

ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಬರ್ಬರ ಕೊಲೆ

ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಯುವತಿಯೋರ್ವಳ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ (Murder) ಘಟನೆ ಚಿತ್ರದುರ್ಗದಲ್ಲಿ.harithalekhani

[ccc_my_favorite_select_button post_id="105392"]
ದೊಡ್ಡಬಳ್ಳಾಪುರ: ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ದೊಡ್ಡಬಳ್ಳಾಪುರ: ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ಬೆಂಗಳೂರು ನಿಂದ ಹಿಂದೂಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಕೆಲ ಪ್ರಯಾಣಿಕರಿಗೆ ಕೈ ಕಾಲು ಮುರಿತ ಸಣ್ಣ ಪುಟ್ಟ. Harithalekhani accident

[ccc_my_favorite_select_button post_id="105419"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!