MSV ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ; ಉಪಲೋಕಾಯುಕ್ತ ಬಿ.ವೀರಪ್ಪರ ಮಾತಿಗೆ ಮಕ್ಕಳು ಫಿದಾ..!| B.Veerappa

ದೊಡ್ಡಬಳ್ಳಾಪುರ: ಶಿಕ್ಷಣ ಸಂಸ್ಥೆಗಳು ಮುಂದಿನ ಸುಭದ್ರ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ (B.Veerappa) ಕರೆ ನೀಡಿದರು.

ನಗರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ 17ನೇ ವರ್ಷದ ಶಾಲಾ ವಾರ್ಷಿಕೋತ್ಸವ “ಸಾರಂಗ್” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

MSV ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ; ಉಪಲೋಕಾಯುಕ್ತ ಬಿ.ವೀರಪ್ಪರ ಮಾತಿಗೆ ಮಕ್ಕಳು ಫಿದಾ..!| B.Veerappa

“ವಿದ್ಯೆ ರಾಜನಿಗೆ ರಾಜ” ಅಂತಹ ವಿದ್ಯೆ ನೀಡುತ್ತಿರುವ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಜೀವನ ಸಾರ್ಥಕ. ಈ ಸಮಾಜದಲ್ಲಿ ನಮಗಿಂತ ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕು. ಸಮಾಜದಲ್ಲಿ ಸಾಧಕನಾಗಿ ಗುರುತಿಸುವ ವ್ಯಕ್ತಿತ್ವ ನಮ್ಮ ಮಕ್ಕಳದ್ದಾಗಬೇಕು.

ಎದೆಗುಂದದೇ ನ್ಯಾಯಯುತವಾಗಿ ಬದುಕಬೇಕು ಎನ್ನುವುದು ಪ್ರತಿಯೊಬ್ಬ ತಂದೆ ತಾಯಿಗಳ ಬಯಕೆಯಾಗಿರುತ್ತದೆ. ಆ ತಂದೆ ತಾಯಿಗಳ ಋಣ ತೀರಿಸುವ ಸಮಾಜದ ಹಾಗೂ ಕಲಿಸಿದ ಶಿಕ್ಷಣ ಮತ್ತು ಶಿಕ್ಷಕನ ಋಣ ತೀರಿಸುವ ಕೆಲಸ ಇಂದಿನ ಮಕ್ಕಳ ಜವಾಬ್ದಾರಿಯಾಗಬೇಕು.

“ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ” ಎನ್ನುವ ವಿವೇಕವಾಣಿ ಮಕ್ಕಳ ಮನಸಲ್ಲಿ ಸದಾ ಗುನುಗುಟ್ಟುತ್ತಿರಬೇಕು. ಮಕ್ಕಳಲ್ಲಿ ದೃಢವಾದ ಸಂಕಲ್ಪ, ಹಠ, ನಿರಂತರ ಪ್ರಯತ್ನ ಇದ್ದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಸಾಧನೆ ಕಂಡು ಹೆತ್ತೊಡಲು ಸಂತಸ ಪಡಬೇಕು. ಸತ್ತಾಗ ಶತ್ರುಗಳೂ ಸಹ ಕಣ್ಣೀರು ಹಾಕುವ ಹಾಗೆ ಜಗ ಮೆಚ್ಚುವ ರೀತಿಯಲ್ಲಿ ಬದುಕಬೇಕು.

ವಿದ್ಯೆಯ ಜೊತೆಗೆ ವಿನಯ, ಸಂಸ್ಕಾರ, ದೇಶಾಭಿಮಾನವನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಕಲ್ಲಿನಲ್ಲಿರುವ ಬೇಡವಾದ ವಸ್ತುವನ್ನು ಹೊರತೆಗೆದು ಪ್ರತಿ ಕಲ್ಲಿನಲ್ಲೂ ಒಂದು ಸುಂದರ ವಿಗ್ರಹವನ್ನು ಕಾಣುವ ಶಿಕ್ಷಕರಿಗೆ ಗೌರವ ತರುವ ಕೆಲಸ ಮಕ್ಕಳದ್ದಾಗಬೇಕು.

ಪ್ರೀತಿ ಪ್ರೇಮದ ಪಾಶ

ಬಾಹ್ಯ ಸೌಂದರ್ಯಕ್ಕೆ ಮನಸೋತು ಇಂದಿನ ಮಕ್ಕಳು ಪ್ರೀತಿ ಪ್ರೇಮದ ಪಾಶದಲ್ಲಿ ಸಿಲುಕಿ ತಮ್ಮ ಮುಂದಿನ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತಹ ಮಕ್ಕಳಿಗೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಡುವಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳ ಮೇಲಿನ ಧೃತರಾಷ್ಟ್ರ ವ್ಯಾಮೋಹವನ್ನು ತೊರೆದು, ಸುಂದರವಾಗಿ ಬದುಕುವ ಕಲೆಯನ್ನು ಕಲ್ಪಿಸಿಕೊಡಬೇಕು ಎಂದರು.

ಹಳ್ಳಿಯ ಬದುಕಿನ ಅರಿವು ಮಕ್ಕಳಲ್ಲಿ ಮೂಡಿಸುವ ಜವಾಬ್ದಾರಿಯುತ ಪಾಲಕರಾಗಬೇಕು. ಮಾನವನ ದುರಾಸೆಯಿಂದ ಪ್ರಕೃತಿ ವಿನಾಶದಂಚಿಗೆ ಸಾಗುತ್ತಿದೆ. ಪರಿಸರ ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಕೈಜೋಡಿಸಬೇಕು. ಪ್ರಕೃತಿಯಲ್ಲಿ ನಿಸ್ವಾರ್ಥತೆಯಿಂದ ಬದುಕುವ ಗಿಡಮರಗಳ ರೀತಿಯಲ್ಲಿ ವಿದ್ಯಾರ್ಥಿಗಳು ಬದುಕಬೇಕು ಎಂದು ಹೇಳಿದರು.

ಒಂಭತ್ತು ಭಾಷೆಯನ್ನು ಬಲ್ಲವ, ಸಮಾಜದಲ್ಲಿ ಅವಮಾನಿತನಾಗಿ ಇಡೀ ದೇಶಕ್ಕೆ ಸಂವಿಧಾನವನ್ನು ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.

ಸಮಾಜದಲ್ಲಿ ಕ್ಯಾನ್ಸರ್ ರೋಗ ತೊಲಗಿಸಬಹುದು. ಆದರೆ ಆ ರೋಗದಂತೆ ಹಬ್ಬಿದ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವಿಲ್ಲ. ಅಂತಹ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಪ್ರತಿ ತಾಯಂದಿರೂ, ತಮ್ಮ ತಮ್ಮ ಪತಿಯರನ್ನು ಹಾಗೂ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ತಾಯಂದಿರಿಗೆ ಸಲಹೆ ನೀಡಿದರು.

MSV ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ; ಉಪಲೋಕಾಯುಕ್ತ ಬಿ.ವೀರಪ್ಪರ ಮಾತಿಗೆ ಮಕ್ಕಳು ಫಿದಾ..!| B.Veerappa

ಈ ಶಿಕ್ಷಣ ಸಂಸ್ಥೆ 132 ಮಕ್ಕಳಿಂದ ಪ್ರಾರಂಭವಾಗಿ ಇಂದು ಸಾವಿರ ಸಾವಿರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಭಾಗದ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದರ ಹಿಂದೆ ಸಂಸ್ಥೆಯ ಅಧ್ಯಕ್ಷರಾದ ಸುಬ್ರಮಣ್ಯ ಹಾಗೂ ಅವರ ಧರ್ಮಪತ್ನಿ ಮಂಜುಳಾರವರ ಅದಮ್ಯ ಆಲೋಚನಾ ಶಕ್ತಿ ನಿರಂತರ ಪ್ರಯತ್ನ ಹಾಗೂ ನಗರದ ಜನರ ಪ್ರೋತ್ಸಾಹವೇ ಕಾರಣವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ರೆಮ್ಯ ಬಿ.ವಿ ಅವರು, ಶಾಲೆಯ ವರ್ಷದ ಸಾಧನೆಗಳನ್ನು ತಮ್ಮ ವಾರ್ಷಿಕ ವರದಿಯಲ್ಲಿ ವಿವರಿಸಿದರು.

MSV ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ; ಉಪಲೋಕಾಯುಕ್ತ ಬಿ.ವೀರಪ್ಪರ ಮಾತಿಗೆ ಮಕ್ಕಳು ಫಿದಾ..!| B.Veerappa

ಸಂಸ್ಥೆಯ ಉಪಾಧ್ಯಕ್ಷ ಸ್ವರೂಪ್ ರವರು 2023-24ನೇ ಸಾಲಿನ ಸಿ.ಬಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ಕಳೆದ ವರ್ಷದ 10 ನೇ ತರಗತಿ ಪರೀಕ್ಷೆಯ. ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಟ್ರಸ್ಟಿ ಡಾ| ಮೃದುಲಾ ಎಸ್. ಸನ್ಮಾನಿಸಿದರು.

ಸಿ.ಬಿ.ಎಸ್.ಸಿ. ವಲಯ ಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ಕ್ರೀಡಾ ರತ್ನಗಳಿಗೆ ಟ್ರಸ್ಟಿ ನಯನಾ ಸ್ವರೂಪ ಸನ್ಮಾನಿಸಿದರು.

MSV ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ; ಉಪಲೋಕಾಯುಕ್ತ ಬಿ.ವೀರಪ್ಪರ ಮಾತಿಗೆ ಮಕ್ಕಳು ಫಿದಾ..!| B.Veerappa

ಕಾರ್ಯಕ್ರಮದ ಅಂಗವಾಗಿ “ವಿವಿಧತೆಯಲ್ಲಿ ಏಕತೆ” ಎಂಬಂತೆ ಭಾರತದ ವಿವಿಧ ರಾಜ್ಯಗಳ ಹಬ್ಬಗಳನ್ನು ಬಿಂಬಿಸುವ ನೃತ್ಯ ನಮ್ಮ ಶಾಲೆಯ ಸ್ವಾಗತ ನೃತ್ಯ, ಸುಮಾರು 20 ನಿಮಿಷಗಳ ಕಾಲ ವೀಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು.

ಹಿರಣ್ಯ ಕಷ್ಯಪ ಸಂಹಾರ, ರಾಮಾಯಣ, ರೈತ ಗೀತೆ, ಉತ್ತರ ಭಾರತ ಹಾಗೂ ಗೋವಾದ ಸ್ಥಳೀಯ ನೃತ್ಯ ಪ್ರಾಕಾರಗಳನ್ನೊಳಗೊಂಡ ಕಾರ್ಯಕ್ರಮಗಳು ವಾರ್ಷಿಕೋತ್ಸವದ ಪ್ರಮುಖ ಅಂಶಗಳಾಗಿದ್ದವು.

MSV ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ; ಉಪಲೋಕಾಯುಕ್ತ ಬಿ.ವೀರಪ್ಪರ ಮಾತಿಗೆ ಮಕ್ಕಳು ಫಿದಾ..!| B.Veerappa

ಜಗಮಗಿಸುವ ಬೆಳಕಿನ ಮಧ್ಯದಲ್ಲಿ ನಕ್ಷತ್ರ ಲೋಕವೇ ಧರೆಗಿಳಿದು ಬಂದಂತೆ, ಮಕ್ಕಳ ಮನರಂಜನಾ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ವಹಿಸಿಕೊಂಡಿದ್ದರು.

ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ DYSP ಗಿರೀಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ANT ಟೆನ್ನಿಸ್ ಅಕಾಡೆಮಿಯ ಆದಿನಾಥ್ ನಾರ್ಡೆ, ರೇವತಿ ನಾರ್ಡೆ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ, ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಸೇರಿ ಸುಮಾರು 4000 ರಿಂದ 5000 ಪ್ರೇಕ್ಷಕರು ಈ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾದರು.

ರಾಜಕೀಯ

ಹಿಂದಿ ಹೇರಿಕೆ ಮಾಡಿದರೆ ರಾಜ್ಯಾದ್ಯಂತ ಹೋರಾಟ: ಸಾ.ರಾ.ಗೋವಿಂದು ಎಚ್ಚರಿಕೆ| Sa.Ra.Govindu

ಹಿಂದಿ ಹೇರಿಕೆ ಮಾಡಿದರೆ ರಾಜ್ಯಾದ್ಯಂತ ಹೋರಾಟ: ಸಾ.ರಾ.ಗೋವಿಂದು ಎಚ್ಚರಿಕೆ| Sa.Ra.Govindu

ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು (Sa.Ra.Govindu)

[ccc_my_favorite_select_button post_id="99228"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ..!: RobinUthappa

ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ..!: RobinUthappa

ರಾಬಿನ್ ಉತ್ತಪ್ಪ ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ ಇಪಿಎಫ್ ರಿಜಿನಲ್ ಕಮಿಷನರ್ ಷಟಾಕ್ಷರಿ ಗೋಪಾಲರೆಡ್ಡಿ ಎಂಬುವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. RobinUthappa

[ccc_my_favorite_select_button post_id="99224"]
Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. Accident

[ccc_my_favorite_select_button post_id="99186"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]