ದೊಡ್ಡಬಳ್ಳಾಪುರ; ಯುವಕನೋರ್ವ ಬೆಂಗಳೂರಿನ ನಂದಿನಿ ಲೇಔಟ್ ನಿಂದ ಬಂದು ತಾಲೂಕಿನ ಮಧುರೆ ಕರೆಗೆ ಬಿದ್ದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮೃತ ದುರ್ದೈವಿಯನ್ನು ನಂದಿನಿ ಲೇಔಟ್ ನಿವಾಸಿ 30 ವರ್ಷದ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಭದ್ರಾಪುರ ಗ್ರಾಮದ ಸಂಬಂಧಿಕರ ಮನೆಗೆ ಬರುತ್ತಿದ್ದ ಯುವಕ, ಮಧುರೆ ಕೆರೆ ಬಳಿ ಚೆಪ್ಪಲಿ, ಬನಿಯನ್ ಹಾಗೂ ಸಾವಿಗೆ ಯಾರು ಕಾರಣರಲ್ಲ ಎಂದು ಟೆತ್ ನೋಟ್ ಬರೆದಿಟ್ಟು ಸಾವನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಕೆರೆಯಲ್ಲಿ ನವೀನ್ ಕುಮಾರ್ ಮೃತದೇಹ ಕೆರೆಯಲ್ಲಿ ತೆಲುತ್ತಿರುವುದ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.