ದೊಡ್ಡಬಳ್ಳಾಪುರ: ನನ್ನ ರಾಜಕೀಯ ಗುರುಗಳಾದ ಹೆಚ್.ಅಪ್ಪಯ್ಯಣ್ಣ ಅಗಲಿಕೆಗೆ ಸಹಿಸಲಾಗದ ನೋವನ್ನು ತಂದಿದೆ ಎಂದು ಜೆಡಿಎಸ್ (JDS) ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತಿಳಿಸಿದ್ದಾರೆ.
ಅಪ್ಪಯ್ಯಣ್ಣ ಅವರ ಅಗಲಿಕೆ ಕುರಿತು ಸಂತಾಪ ಸೂಚಿಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಅಪ್ಪಯ್ಯಣ ಅವರು, ಅಧಿಕಾರ ಇರಲಿ, ಇಲ್ಲದೆ ಇರಲಿ ತನ್ನ ನಂಬಿ ಬಂದವರಿಗೆ ನೆರವಾಗಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಆಲದ ಮರದಂತಿದ್ದ ಅಪ್ಪಯ್ಯಣ್ಣ ಅವರು, ಕಾರ್ಯಕರ್ತರಿಗೆ ಅನೇಕ ಹುದ್ದೆ ಕೊಡಿಸುವಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಂತವರು. ಅವರ ಅಗಲಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.
ಅಪ್ಪಯ್ಯಣ್ಣ ಅಗಲಿಕೆಯ ನೋವನ್ನು ತಡೆಯುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲೆಂದು ಹರೀಶ್ ಗೌಡ ಭಾವುಕರಾಗಿ ನುಡಿದಿದ್ದಾರೆ.