ದೊಡ್ಡಬಳ್ಳಾಪುರ: ತಾಲ್ಲೂಕು ಒಕ್ಕಲಿಗ ಯುವ ವೇದಿಕೆ ವತಿಯಿಂದ ರಾಜ್ಯಕಂಡ ದೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವ, ಪದ್ಮ ವಿಭೂಷಣ ಎಸ್ಎಂ ಕೃಷ್ಣ (SM Krishna) ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಎಸ್ಎಂ ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪದಾಧಿಕಾರಿಗಳು ನಮನ ಸಲ್ಲಿಸಿದರು.
ಈ ವೇಳೆ ವಕ್ಕಲಿಗ ಯುವ ವೇದಿಕೆಯ ಎಂ.ಸಿ.ಮನೋಹರ್, ಡಿ.ಕ್ರಾಸ್ ಹರ್ಷ, ಆರ್.ಸಿ.ಎಂ. ಮುನಿಪಾಪಯ್ಯ ಮೇಳೆಕೋಟೆ ಕ್ರಾಸ್ ನಾಗೇಶ್, ಶಿವಕುಮಾರ್ ಎ., ಕೋಡಿಹಳ್ಳಿ ವಿಶ್ವಾಸ್ ಹನುಮಂತೇಗೌಡ, ದಿಪುಗೌಡ, ಪ್ರೆಸ್ ಕುಮಾರ್, ಕನಕರಾಜ್ ಜಿಂಕೆಬಚ್ಚಹಳ್ಳಿ, ಆರ್.ಸಿ.ಎಂ.ಮುನೀಂದ್ರ ಇದ್ದರು.