ಬೆಳಗಾವಿ: ವಿಧಾನಮಂಡಲದ ಚಳಿಗಾಲದ 11ನೇ ಅಧಿವೇಶನ (Winter session) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಪೀಕರ್ ಯುಟಿ ಖಾದರ್ ನೇತೃತ್ವದಲ್ಲಿ ಸದನಕ್ಕೆ ಚಾಲನೆ ಸಿಕ್ಕಿದ್ದು, ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿಜೇತರಾದ ಹೊಸ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಶಿಗ್ಗಾವಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹಾಗೂ ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಶಾಸಕರಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದಾರೆ.
ವಿಶೇಷವಾಗಿ ಶಿಗ್ಗಾವಿ ಶಾಸಕ ಪಠಾಣ್ ಅವರು ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು.
ಸ್ಪೀಕರ್ ಒಬ್ಬೊಬ್ಬರೆ ಹೊಸ ಶಾಸಕರನ್ನ ಕರೆದು ರಿಜಿಸ್ಟರ್ ಪುಸ್ತಕದಲ್ಲಿ ಸಹಿ ಮಾಡಿಸಿದರು. ಮೂವರು ಗೆದ್ದ ಅಭ್ಯರ್ಥಿಗಳು ಇಂದಿನಿಂದ ಅಧಿಕೃತವಾಗಿ ಶಾಸಕರಾಗಿದ್ದಾರೆ
ಕಳೆದ ತಿಂಗಳು ನಡೆದ ಬೈ ಎಲೆಕ್ಷನ್ ನಲ್ಲಿ ಮೂವರು ಶಾಸಕರು ಆಯ್ಕೆಯಾಗಿದ್ದರು. 3 ಹೊಸ ಶಾಸಕರ ಪ್ರಮಾಣದಿಂದ ಕಾಂಗ್ರೆಸ್ ನ ಸದನದ ಸಂಖ್ಯಾಬಲ 138ಕ್ಕೆ ಏರಿಕೆಯಾಗಿದೆ.