ಬೆಂಗಳೂರು: ಬಟ್ಟೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮದ ಸಮಯದಲ್ಲಿ ಮಂಗಳಮುಖಿಯರು ಬಂದು ಗಲಾಟೆ ಮಾಡಿದ ಘಟನೆ ವಿಜಯ ನಗರ ಹಂಪಿನಗರದಲ್ಲಿ ನಡೆದಿದೆ (complaint).
ಬಟ್ಟೆ ಅಂಗಡಿ ಉದ್ಘಾಟನೆ ಮುನ್ನ ಹೋಮ-ಹವನ ಆಯೋಜನೆ ಗೊಂಡಿತ್ತು. ಸರಿಯಾಗಿ ಪೂಜೆ ಸಮಯಕ್ಕೆ ನಾಲ್ವರ ಮಂಗಳಮುಖಿರ ಗುಂಪು ಆಗಮಿಸಿತು. ಮಂಗಳ ಮುಖಿಯರಿಗೆ ಮಾಲೀಕ 2 ಸಾವಿರ ರೂ. ನೀಡಿದ್ದಾರೆ. ಆದರೆ 2 ಸಾವಿರ ರೂ.ಗೆ ಒಪ್ಪದ ಅವರು 10 ಸಾವಿರ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
10 ಸಾವಿರ ರೂ. ಕೊಡದೇ ಇದ್ದದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಬಟ್ಟೆ ಅಂಗಡಿ ಮಾಲೀಕ ರಾಘವೇಂದ್ರ ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ನೋವು ತೋಡಿಕೊಂಡ ರಾಘವೇಂದ್ರ ಅವರು, ಶುಭಕಾರ್ಯ ಬಂದರೆ ಸಾಕು ಮಂಗಳಮುಖಿ ಯರು ಬರುತ್ತಾರೆ.
ಅವರು ಬಂದರು ಅಂತ ನಮಗೆ ತಿಳಿದಷ್ಟು ಹಣ ನೀಡಿದರೆ ಒಪ್ಪುವುದಿಲ್ಲ. ಇಷ್ಟೇ ಕೊಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.