ಲಖನೌ: ಕೋಮು ಹಿಂಸಾಚಾರಕ್ಕೆ ಪೀಡಿತವಾಗಿರುವ ಉತ್ತರ ಪ್ರದೇಶದ ಸಂಭಲ್ ಮಸೀದಿ ಸ್ಥಳಕ್ಕೆ ಭೇಟಿಗೆಂದು ತೆರಳಿದ್ದ ಲೋಕಸಭೆ ವಿಪಕ್ಷ ನಾಯಕ (LOP) ರಾಹುಲ್ ಗಾಂಧಿ ಹಾಗೂ ಇತರೆ ಪಕ್ಷದ ಐವರು ಸಂಸದರ ನಿಯೋಗವನ್ನು ಪೊಲೀಸರು ತಡೆದಿದ್ದಾರೆ.
ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಬಂದ ರಾಹುಲ್ ಗಾಂಧಿ ನೇತೃತ್ವದ ನಿಯೋಗವನ್ನು ಘಾಜಿಪುರ ಗಡಿಯಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ನಿಯೋಗ ಸಂಭಲ್‌ಗೆ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಸಂಭಲ್‌ನಲ್ಲಿ ನಿಷೇಧಾಜ್ಞೆ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.
नेता विपक्ष श्री @RahulGandhi और कांग्रेस महासचिव व सांसद श्रीमती @priyankagandhi जी संभल में पीड़ित परिवारों से मिलना चाहते हैं।
— Congress (@INCIndia) December 4, 2024
यूपी सरकार पुलिस और प्रशासन लगाकर उन्हें रोक रही है।
आखिर यूपी सरकार को किस बात का डर है? कौन सी ऐसी बात है जो छिपाई जा रही है? pic.twitter.com/e1sMdKNQO9
ಸಂಭಲ್‌ನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹಾಗಾಗಿ ಸಂಭಲ್‌ಗೆ ರಾಹುಲ್ ಗಾಂಧಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. ಗಾಜಿಪುರ ಗಡಿಯಲ್ಲಿ ರಾಹುಲ್ ಗಾಂಧಿ ಅವರನ್ನು ತಡೆ ಹಿಡಿಯಲಾಗಿದೆ ಎಂದು ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಘಾಜಿಪುರ ಗಡಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ LOP ರಾಹುಲ್ ಗಾಂಧಿ, “ನಾವು ಸಂಭಾಲ್‌ಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ, ಪೊಲೀಸರು ನಿರಾಕರಿಸುತ್ತಿದ್ದಾರೆ, ಅವರು ನಮಗೆ ಅವಕಾಶ ನೀಡುತ್ತಿಲ್ಲ.
#WATCH | At the Ghazipur border, Lok Sabha LoP Rahul Gandhi says "We are trying to go to Sambhal, the police is refusing, they are not allowing us. As LoP, it is my right to go, but they are stopping me. I am ready to go alone, I am ready to go with the police, but they did not… pic.twitter.com/iFWMQRKmk3
— ANI (@ANI) December 4, 2024
LOPಯಾಗಿ ಗಲಭೆ ಪೀಡಿತ ಸ್ಥಳಕ್ಕೆ ಹೋಗುವುದು ನನ್ನ ಹಕ್ಕು, ಆದರೆ ಅವರು ನನ್ನನ್ನು ತಡೆಯುತ್ತಿದ್ದಾರೆ, ನಾನು ಒಂಟಿಯಾಗಿ ಹೋಗಲು ಸಿದ್ದನಿದ್ದೇನೆ. ಆದರೆ ಅವರು ಅದನ್ನ ಪುರಸ್ಕರಿಸುತ್ತಿಲ್ಲ.
ನಾವು ಸಂಭಾಲ್‌ಗೆ ಹೋಗಿ ಅಲ್ಲಿ ಏನಾಯಿತು ಎಂಬುದನ್ನು ನೋಡಲು ಬಯಸುತ್ತೇವೆ, ನನ್ನ ಸಂವಿಧಾನದ ಹಕ್ಕನ್ನು ನನಗೆ ನೀಡಲಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಭಲ್‌ನಲ್ಲಿರುವ ಶಾಹಿ ಮಸೀದಿ ಮೂಲತಃ ಹರಿಹರ ಮಂದಿರ ಅಗಿತ್ತು ಎಂದು ಅರ್ಜಿ ಸಲ್ಲಿಕೆಯಾದ ಕಾರಣ, ಮಸೀದಿ ಸಮೀಕ್ಷೆಗೆ ಸ್ಥಳೀಯ ನ್ಯಾಯಾಲಯ ಆದೇಶಿಸಿತ್ತು. ಹೀಗಾಗಿ ಸಮೀಕ್ಷೆ ವಿರೋಧಿಸಿ ಸಂಭಲ್‌ನಲ್ಲಿ ನ.25ರಂದು ಗಲಭೆ ಸೃಷ್ಟಿಯಾಗಿತ್ತು. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ