ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧ್ಯಕ್ಷರಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ, ನಿಕಟ ಪೂರ್ವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಇಂದು ಅಧಿಕಾರ ವಹಿಸಿಕೊಂಡರು.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿರ್ಗಮಿತ ಅಧ್ಯಕ್ಷ ಗ್ರೆಗ್ ಬರ್ಕ್ಸೆ ಅವರ ಅಧಿಕಾರಾವಧಿ ನವೆಂಬರ್ 30ಕ್ಕೆ ಕೊನೆಗೊಂಡಿದೆ.
ಐಸಿಸಿ ಅಧ್ಯಕ್ಷರು ತಲಾ ಎರಡು ವರ್ಷಗಳ ಮೂರು ಅವಧಿಗೆ ಆಯ್ಕೆಯಾಗಬಹುದು. ಗ್ರೆಗ್ ಬರ್ಕ್ಸೆ ಅವರು ಮೂರನೇ ಅವಧಿಗೆ ಮುಂದುವರೆಯಲು ನಿರಾಕರಿಸಿದ್ದರು. ಹೀಗಾಗಿ ಐಸಿಸಿಯಲ್ಲಿ ಪ್ರಭಾವಿಯಾಗಿರುವ ಭಾರತದ ಜಯ್ ಶಾ ಅವರು ಕಳೆದ ಸೆಪ್ಟೆಂಬರ್‌ನಲೇ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇಂದು ಅಧಿಕಾರ ಸ್ವೀಕರಿಸಿದ ಶಾ, ಮಂಡಳಿಯ ನಿರ್ದೇಶಕರ ಹಾಗೂ ಸದಸ್ಯರ ವಿಶ್ವಾಸ ಪಡೆದು ಕ್ರಿಕೆಟ್‌ನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಗೃಹ ಸಚಿವ ಅಮಿತ್ ಶಾ ಮಗನೂ ಆಗಿರುವ ಜಯ್ ಶಾ ಹೇಳಿದ್ದಾರೆ.